ಬಾಗಲಕೋಟೆ: ಪೊಲೀಸ್ ಇಲಾಖೆ ಬರೀ ಹಿಂದುಗಳನ್ನಷ್ಟೇ ಹಿಡಿಯೋದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಬಾಗಲಕೋಟೆಯ ಕೆರೂರು ಘರ್ಷಣೆ ಗಾಯಾಳುಗಳ ಆರೋಗ್ಯ ವಿಚಾರಿಸಿದ ಅವರು, ಅಲ್ಪಸಂಖ್ಯಾತರು ಇಂತಹ ಕೃತ್ಯ ಮಾಡುತ್ತಿರುವುದು ಬಹಳ ಆತಂಕಕಾರಿಯಾಗಿದೆ. ಅವರನ್ನು ಹೀಗೆ ಬಿಟ್ಟರೆ ದೇಶದಲ್ಲಿ ಹಿಂದೂಗಳು ನೆಮ್ಮದಿಯಿಂದ ಜೀವನ ಮಾಡಲು ಆಗುವುದಿಲ್ಲ.
ಉತ್ತರಪ್ರದೇಶದಲ್ಲಿ ಹೇಗೆ ಆರೋಪಿತರ ಎನ್ ಕೌಂಟರ್ ಮಾಡುತ್ತಿದ್ದಾರೋ, ಹೇಗೆ ಮನೆಗಳಿಗೆ ಬುಲ್ಡೋಜರ್ ಹಚ್ಚುತ್ತಿದ್ದಾರೊ ಹಾಗೆ ಕರ್ನಾಟಕದಲ್ಲೂ ಪ್ರಾರಂಭ ಮಾಡಬೇಕು. ನಾನು ಕರ್ನಾಟಕ ಗೃಹ ಮಂತ್ರಿಗೆ ಆಗ್ರಹ ಮಾಡುತ್ತೇನೆ. ನಿಮ್ಮ ಕಠಿಣ ಕ್ರಮ ಅನ್ನುವ ಶಬ್ದ ಬಿಟ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಈ ಘಟನೆಯಲ್ಲಿ ಹಿಂದೂಗಳ ಅಪರಾಧಿಗಳೇ ಅಲ್ಲ. ಹೊಡೆದಿರುವವರು ಮುಸ್ಲಿಮರು. ಇದರಿಂದ ಅವರನ್ನು ಅರೆಸ್ಟ್ ಮಾಡಬೇಕು. ಆದರೆ 11 ಜನ ಹಿಂದೂಗಳನ್ನು ಅರೆಸ್ಟ್ ಮಾಡಿದ್ದಾರೆ ಎಂದು ಗುಡುಗಿದ ಅವರು, ಪೊಲೀಸ್ ಇಲಾಖೆ ಕಾರ್ಯವೈಖರಿ ಬದಲಾವಣೆ ಮಾಡಬೇಕು. ಘಟನೆ ನೋಡಿಕೊಂಡು ಮೂಕಪ್ರೇಕ್ಷಕರಾಗಿ ನಿಂತರೆ ಏನು? ಪೊಲೀಸರ ಕೈಯಲ್ಲಿ ಲಾಠಿ ಬಂದೂಕು ಯಾಕೆ ಕೊಟ್ಟಿದ್ದಾರೆ. ಆದರೂ ಹಲ್ಲೆಕೋರರಿಗೆ ಭಯ ಇಲ್ಲದಂಗಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಪುಟ ಬದಲಾವಣೆ, ವಿಸ್ತರಣೆ ಏನು ಆಗೋದಿಲ್ಲ ಇನ್ನು 8 ತಿಂಗಳು ಇದೆ. ನನಗೆ ವಕ್ಫ್ ಮತ್ತು ಧಾರ್ಮಿಕ ದತ್ತಿ ಇಲಾಖೆ ಕೊಟ್ಟರೆ ಏನು ಮಾಡಲಿ, ಹೋಮ್ ಇಲಾಖೆ ಕೊಟ್ಟರೆ ಎನ್ ಕೌಂಟರ್ ಮಾಡಿ ಬರೋಬ್ಬರಿ ಇಡುತ್ತೇನೆ ಎಂದು ಹೇಳಿದರು.
PublicNext
10/07/2022 02:05 pm