ದಾವಣಗೆರೆ: ದಾವಣಗೆರೆ - ಹರಿಹರ ರಾಷ್ಟ್ರೀಯ ಹೆದ್ದಾರಿಯ ಶಾಮನೂರು ಪ್ಯಾಲೇಸ್ ಗ್ರೌಂಡ್ ನಲ್ಲಿ ಆಗಸ್ಟ್ 3ರಂದು ನಡೆಸಲು ಉದ್ದೇಶಿಸಿರುವ ಸಿದ್ದರಾಮಯ್ಯ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದ ಸ್ಥಳ ಪರಿಶೀಲನೆಯನ್ನು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಕಾಂಗ್ರೆಸ್ ನಾಯಕರು ಪರಿಶೀಲಿಸಿದರು.
ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವ ರೀತಿಯಲ್ಲಿ ಇಲ್ಲಿ ಸಮಾರಂಭ ಆಯೋಜಿಸಬೇಕು. ಲಕ್ಷಾಂತರ ಜನರು ಆಗಮಿಸುವ ಕಾರಣ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು.ಬರುವವರು ಹಾಗೂ ಹೋಗುವವರಿಗೆ ಸಮರ್ಪಕವಾದ ವ್ಯವಸ್ಥೆ ಮಾಡಬೇಕು. ಎಲ್ಲಿಯೂ ಲೋಪವಾಗದಂತೆ ನೋಡಿಕೊಳ್ಳಬೇಕು. ಎಷ್ಟು ಜಾಗವಿದೆ, ಹೇಗೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ರೂಪಿಸಬೇಕು ಎಂಬ ಬಗ್ಗೆಯೂ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಂದ ಸಮಿತಿಯ ಪ್ರಮುಖರು ಮಾಹಿತಿ ಪಡೆದುಕೊಂಡರು.
ಬಳಿಕ ಮಾತನಾಡಿದ ಬಸವರಾಜ್ ರಾಯರೆಡ್ಡಿ, ಸಿದ್ದರಾಮೋತ್ಸವ ಎಂದು ನಾವೆಲ್ಲಿಯೂ ಹೇಳಿಲ್ಲ. ಬಿಜೆಪಿಯವರಷ್ಟು ಕೆಳಮಟ್ಟಕ್ಕೆ ನಾವು ಇಳಿಯುವುದಿಲ್ಲ. ಈ ಕಾರ್ಯಕ್ರಮದ ಬಗ್ಗೆ ಏನೆನ್ನೆಲ್ಲಾ ಗೊಂದಲ ಸೃಷ್ಟಿಸಲಾಗುತ್ತಿದೆ! ಇದು ಸರಿಯಲ್ಲ. ನಾವೇ ನಡೆಸುತ್ತಿರುವ ಕಾರ್ಯಕ್ರಮ. ಪಕ್ಷದಿಂದ ನಡೆಸುತ್ತಿಲ್ಲ. ಎಲ್ಲರೂ ಒಟ್ಟಾಗಿ ನಡೆಸುತ್ತಿದ್ದೇವೆ. ಈ ಮೂಲಕ ನಾಡು ಕಂಡ ಸರ್ವಶ್ರೇಷ್ಠ ನಾಯಕನಿಗೆ ಗೌರವ ಸಲ್ಲಿಸುತ್ತಿದ್ದೇವೆ. ಬೇರೆ ಯಾವ ಪಕ್ಷದ ಮುಖಂಡರನ್ನು ಆಹ್ವಾನಿಸಿಲ್ಲ. ಸ್ವಪಕ್ಷದವರೇ ಬಹುತೇಕ ಇರುತ್ತಾರೆ ಎಂದು ತಿಳಿಸಿದರು.
PublicNext
09/07/2022 08:20 pm