ಬೆಂಗಳೂರು: ಬಿಜೆಪಿ ಜಗತ್ತಿನ ಎಲ್ಲಾ ಬಗೆಯ ಉಗ್ರವಾದಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಭಯವನ್ನು ಉತ್ಪಾದಿಸಿಯೇ ಮತವನ್ನು ಉತ್ಪಾದಿಸುವುದು ಬಿಜೆಪಿಯ ಏಕೈಕ ಕಾರ್ಯತಂತ್ರ. ದೇಶದಲ್ಲಿ ನಡೆಯುವ ಎಲ್ಲಾ ಉಗ್ರ ಚಟುವಟಿಕೆಗಳೂ ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವುದು ಬೆಳಕಿಗೆ ಬರುತ್ತಿವೆ. ಉಗ್ರವಾದದ ‘ಮಹಾ ಪೋಷಕ’ ಬಿಜೆಪಿ ಎಂಬುದಾಗಿ ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, ಮಲೆಗಾಂವ್ ಸ್ಪೋಟದ ರೂವಾರಿ ಭಯೋತ್ಪಾದಕಿ, ದೇಶಕ್ಕಾಗಿ ಜೀವ ತೆತ್ತ ಹೇಮಂತ್ ಕರ್ಕರೆಯ ನಿಂದಕಿಗೆ “ಸಂಸದೆ” ಸ್ಥಾನದ ಉಡುಗೊರೆ. ಕನ್ನಯ್ಯ ಲಾಲ್ ಹಂತಕರಿಗೆ, ಜಮ್ಮುವಿನ ಬಿಜೆಪಿ ಐಟಿ ಸೆಲ್ ಕಾರ್ಯಕರ್ತನಾದ ಲಷ್ಕರ್ ಉಗ್ರನಿಗೂ ಮುಂದಿನ ದಿನಗಳಲ್ಲಿ ಬಿಜೆಪಿ ಸಂಸತ್ತಿಗೆ ಕಳಿಸಿದರೂ ಆಶ್ಚರ್ಯವಿಲ್ಲ ಎಂದು ಹೇಳಿದೆ.
ಅಪರಾಧಿಗಳನ್ನು, ಕೊಲೆಗಡುಕರನ್ನು, ಡ್ರಗ್ ಪೆಡ್ಲರ್‌ಗಳನ್ನು, ಭಯೋತ್ಪಾದಕರನ್ನು ಹುಡುಕಬೇಕೆಂದರೆ ಹೆಚ್ಚು ಶ್ರಮವೇ ಬೇಕಿಲ್ಲ, ಬಿಜೆಪಿ ಕಚೇರಿ ಶೋಧಿಸಿದರೆ ಸಾಕು! ಕ್ರಿಮಿನಲ್‌ಗಳಿಗೆ, ಭಯೋತ್ಪಾದಕರಿಗೆ ಬಿಜೆಪಿಯೇ ‘ಆಶ್ರಯತಾಣ’ ಎಂಬುದಕ್ಕೆ ಕನ್ನಯ್ಯ ಲಾಲ್ ಹಂತಕರು ಹಾಗೂ ಜಮ್ಮುವಿನ ಬಂಧಿತ ಲಷ್ಕರ್ ಉಗ್ರನೇ ನಿದರ್ಶನ ಎಂದು ಹೇಳಿದೆ.
ಭಯೋತ್ಪಾದಕರಿಗೆ “ಸಂಸದ” ಸ್ಥಾನದ ಉಡುಗೊರೆ ಕೊಡುವುದು ಬಿಜೆಪಿಯ ಪರಂಪರೆ. ಅಂತೆಯೇ ಕನ್ನಯ್ಯ ಲಾಲ್ ಹಂತಕರಿಗೆ, ಜಮ್ಮುವಿನ ಬಿಜೆಪಿ ಐಟಿ ಸೆಲ್ ಕಾರ್ಯಕರ್ತನಾದ ಲಷ್ಕರ್ ಉಗ್ರನಿಗೂ ಮುಂದಿನ ದಿನಗಳಲ್ಲಿ ಬಿಜೆಪಿ ಸಂಸತ್ತಿಗೆ ಕಳಿಸಿದರೆ ಆಶ್ಚರ್ಯವಿಲ್ಲ. ಭಯವೇ ಬಿಜೆಪಿಯ ಮತಗಳಿಕೆಯ ಅಸ್ತ್ರ ಎಂದು ವಾಗ್ದಾಳಿ ನಡೆಸಿದೆ.
PublicNext
09/07/2022 07:36 pm