ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಸ್‌ಐ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ರಾಜ್ಯ ಸರಕಾರಕ್ಕೆ ಭಯ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯ ಸರ್ಕಾರ ಪಿಎಸ್ಐ ನೇಮಕಾತಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸೋದಕ್ಕೆ ಹೆದರುತ್ತಿದೆ. ಈ ಹಗರಣದಲ್ಲಿ ನಿಮ್ಮ ಪಾಲು ಇಲ್ಲವೇ ಇಲ್ಲ ಎಂದಾದಲ್ಲಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಲು ಯಾಕೆ ಹೆದರುತ್ತಿದ್ದೀರಿ? ಎಂದು ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಅಕ್ರಮದ ಕುರಿತು ಕಾಂಗ್ರೆಸ್ ಬಳಿ ಯಾವ ಸಾಕ್ಷ್ಟಾಧಾರಗಳಿವೆ ಎಂದು ಬಿಜೆಪಿ ಕೇಳಿರುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ‘ಈ ಪ್ರಕರಣದ ತನಿಖೆಯನ್ನು ನಡೆಸಲು ಈ ಸರ್ಕಾರ ಅಸಮರ್ಥವಾಗಿದೆ ಎಂದು ಒಪ್ಪಿಕೊಳ್ಳಲಿ. ಅವರಿಗೆ ತನಿಖೆ ಮಾಡಲು ಸಾಧ್ಯವಾಗದಿದ್ದರೆ ತನಿಖೆಯ ಅಧಿಕಾರವನ್ನು ನಮ್ಮ ಕೈಗೆ ತನಿಖೆ ನೀಡಲಿ, ನಾವು ಮಾಡಿ ತೋರಿಸುತ್ತೇವೆ ಎಂದರು.

ಸರ್ಕಾರ ಯಾರ ಬಳಿ ಇದೆ? ತನಿಖೆ ಮಾಡಲು ಯಾರ ಬಳಿ ಅಸ್ತ್ರಗಳಿವೆ? ಗೃಹ ಸಚಿವರು ಮಾತೆತ್ತಿದರೆ ಈ ಪ್ರಕರಣದಲ್ಲಿ ಕಾಂಗ್ರೆಸಿಗರು ಇದ್ದಾರೆ ಎನ್ನುತ್ತಾರೆ. ಈ ಪ್ರಕರಣದಲ್ಲಿ ಬಿಜೆಪಿಯವರಿಲ್ಲ, ಕಾಂಗ್ರೆಸಿಗರಿದ್ದಾರೆ ಎಂದಾದರೆ ಯಾಕೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುತ್ತಿಲ್ಲ? ಇನ್ನು ಮುಖ್ಯಮಂತ್ರಿಗಳು ಕಳೆದ ಕಾಂಗ್ರೆಸ್ ಸರ್ಕಾರದ ಅಕ್ರಮಗಳನ್ನು ತೆಗೆಯುವುದಾಗಿ ಹೇಳಿದ್ದಾರೆ. ನೀವು ಕೇವಲ 5 ವರ್ಷ ಮಾತ್ರವಲ್ಲ, ಕಳೆದ 50 ವರ್ಷಗಳ ಪ್ರಕರಣವನ್ನು ತೆಗೆಯಿರಿ ಎಂದು ಒತ್ತಾಯಿಸಿದರು.

ಈ ಹಗರಣದಲ್ಲಿ ನಿಮ್ಮ ಪಾಲು ಇಲ್ಲದಿದ್ದರೆ ನ್ಯಾಯಾಂಗ ತನಿಖೆ ನೀಡಲು ಭಯವೇಕೆ? ನಿಮ್ಮ ಹೆಸರು ಅಥವಾ ಬೇರೆಯವರ ಹೆಸರು ಬರುತ್ತದೆ ಎಂಬ ಭಯವಿದೆಯೇ? ಪತ್ರಿಕೆಗಳಲ್ಲಿ ನಿಮ್ಮ ಹೆಸರು ಬರಬೇಕು ಎಂದು ಏನುಬೇಕೋ ಅದನ್ನು ಮಾತನಾಡುವುದಲ್ಲ. ನೀವು ನಿಜವಾಗಿಯೂ ತಪ್ಪಿತಸ್ಥರಲ್ಲದಿದ್ದರೆ, ನ್ಯಾಯಾಂಗ ತನಿಖೆ ನೀಡಿ. ಅದರ ಹೊರತಾಗಿ ಬೇರೆ ಮಾತು ಬೇಡ ಎಂದು ಹೇಳಿದರು.

Edited By : Nagaraj Tulugeri
PublicNext

PublicNext

09/07/2022 05:07 pm

Cinque Terre

62.26 K

Cinque Terre

4

ಸಂಬಂಧಿತ ಸುದ್ದಿ