ಕೋಲ್ಕತ್ತಾ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನ ತೃಣಮೂಲ ಕಾಂಗ್ರೆಸ್ ಟೀಕಿಸಿದ್ದು,ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಯನ್ನ "ಶಿಂಜೋ ಅಬೆ ಹತ್ಯೆ ಹಿಂದೆ ಅಗ್ನಿಪಥ್ ನೆರಳು" ಎಂಬ ಟೈಟಲ್ ಮೂಲಕ
ಪಕ್ಷದ ಮುಖವಾಣಿ "ಜಾಗೋ ಬಾಂಗ್ಲಾ"ದಲ್ಲಿ ಉಲ್ಲೇಖಿಸಿದೆ.
ಶಿಂಜೋ ಹತ್ಯೆ ಮಾಡಿರೋ ವ್ಯಕ್ತಿಯನ್ನ ಟೆಟ್ಸುಯಾ ಯಗಾಮಿ (41) ಎಂದು ಗುರುತಿಸಲಾಗಿದೆ. ಈತ ಜಪಾನಿನ ನೌಕಾಪಡೆಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದಾನೆ.
ಅಗ್ನಿಪಥ್ ಯೋಜನೆಗೆ ಈ ಘಟನೆಯನ್ನ ಕಾಂಗ್ರೆಸ್ ಪಕ್ಷದ ನಾಯಕ ಸುರೇಂದ್ರ ರಜಪೂತ್ ಹೋಲಿಕೆ ಮಾಡಿದ್ದಾರೆ. ಪಿಂಚಣಿ ಸೌಲಭ್ಯ ಇಲ್ಲದೇ ಮಾಜಿ ಸೈನಿಕ ಯಗಾಮಿ,ಮಾಜಿ ಪ್ರಧಾನಿ ಶಿಂಜೋ ಹತ್ಯೆ ಮಾಡಿದ್ದಾನೆ ಎಂದು ಟೀಕಿಸಿದ್ದಾರೆ.
PublicNext
09/07/2022 04:17 pm