ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಠಾಕ್ರೆಗೆ ಮತ್ತೊಂದು ಶಾಕ್: ಮಹಾ ಸಿಎಂ ಶಿಂಧೆ ಪಾಳಯಕ್ಕೆ ಥಾಣೆಯ 66 ಶಿವಸೇನೆ ಕಾರ್ಪೊರೇಟರ್‌ಗಳು ಸೇರ್ಪಡೆ

ಮುಂಬೈ: ಮಾಜಿ ಮೇಯರ್ ನರೇಶ್ ಮಸ್ಕೆ ನೇತೃತ್ವದಲ್ಲಿ ಥಾಣೆಯ 66 ಶಿವಸೇನೆ ಕಾರ್ಪೊರೇಟರ್‌ಗಳು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪಾಳೆಯವನ್ನು ಸೇರಿಕೊಂಡಿದ್ದಾರೆ.

ನಂದನವನದ ಸಿಎಂ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಥಾಣೆಯ 66 ಶಿವಸೇನೆ ಕಾರ್ಪೊರೇಟರ್‌ಗಳು ಏಕನಾಥ್ ಶಿಂಧೆ ಅವರಿಗೆ ಶುಭ ಕೋರಿದರು. ಇನ್ನು ಅಮರಾವತಿ ಲೋಕಸಭೆಯ ಮಾಜಿ ಸಂಸದ ಆನಂದರಾವ್ ವಿಠ್ಠಲ ಅಡ್ಸುಲ್ ಕೂಡ ಸೇನಾ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಿವಸೇನೆಯು ಪ್ರಸ್ತುತ ಎರಡು ಪಾಳೆಯಗಳಾಗಿ ವಿಭಜನೆಯಾಗಿದೆ. ಒಂದು ಉದ್ಧವ್ ಠಾಕ್ರೆ ಮತ್ತು ಇನ್ನೊಂದು ಶಿಂಧೆ ನೇತೃತ್ವದಲ್ಲಿ.

Edited By : Vijay Kumar
PublicNext

PublicNext

07/07/2022 02:55 pm

Cinque Terre

29.42 K

Cinque Terre

6

ಸಂಬಂಧಿತ ಸುದ್ದಿ