ಬೆಂಗಳೂರು: ರಾಜ್ಯ ಸರಕಾರದ ಮೇಲಿನ ಭ್ರಷ್ಟಾಚಾರ ಆರೋಪ ಹಾಗೂ ಪಿಎಸ್‌ಐ ನೇಮಕಾತಿ ಹಗರಣದ ಕುರಿತಾಗಿ ಪ್ರತಿಪಕ್ಷಗಳು ಸರಕಾರದ ಮೇಲೆ ಟೀಕಾ ಪ್ರಹಾರ ನಡೆಸಿವೆ. ಇದಕ್ಕೆ ಆಡಳಿತ ಪಕ್ಷದ ನಾಯಕರು ಕೂಡ ಏಟಿಗೆ ಎದಿರೇಟು ಎಂಬಂತೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟೀಕೆಗಳಿಗೆ ಪ್ರತ್ಯುತ್ತರ ನೀಡಿರುವ ಸಚಿವ ಅಶ್ವತ್ಥನಾರಾಯಣ 'ಅರ್ಕಾವತಿ ಹಗರಣದ ಪಿತಾಮಹ ಸಿದ್ದರಾಮಯ್ಯ' ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಅವರು, ಲೋಕಾಯುಕ್ತದ ಕೈ ಕಟ್ಟಿ ನೀರಿಗೆ ಬಿಟ್ಟ "ಅರ್ಕಾವತಿ ಹಗರಣದ ಪಿತಾಮಹ" ಸಿದ್ದರಾಮಯ್ಯ ಅವರ ಸುಳ್ಳುಗಳ ಸರಮಾಲೆಯನ್ನು ಕೇಳಿ, ಡಿಕೆ ಶಿವಕುಮಾರ್ ಅವರು ಅಹುದಹುದೆನ್ನಬಹುದೇ ವಿನಃ ನಾಡಿನ ಜನರು ನಂಬಲಾರರು ಎಂದಿದ್ದಾರೆ.
ಡಿವೈಎಸ್‌ಪಿ ಗಣಪತಿ ಅವರ ಆತ್ಮಹತ್ಯೆಗೆ ಕಾರಣವೇನೆಂದು ಕೇಳಿದರೆ ಕಳ್ಳರಂತೆ ನುಣುಚಿಕೊಳ್ಳುವುದೇಕೆ ಸಿದ್ದರಾಮಯ್ಯ ಅವರೇ?
ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯ ಸಿಇಒ ಆಗಲು ಪೈಪೋಟಿ ನಡೆಸುತ್ತಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು "ದಿನಕ್ಕೊಂದು ಸುಳ್ಳು" ಎಂಬ ತತ್ತ್ವಕ್ಕೆ ಮೊರೆ ಹೋಗಿದ್ದಾರೆ. ತಾವು ಬೆಳೆಸಿದ ಭ್ರಷ್ಟರನ್ನು ಬಿಜೆಪಿ ಸರ್ಕಾರ ಮಟ್ಟ ಹಾಕುತ್ತಿದೆ ಎಂಬ ಭಯ ಅವರಲ್ಲಿ ಅಸ್ಥಿರತೆ ಉಂಟು ಮಾಡಿದೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
PublicNext
06/07/2022 05:24 pm