ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿಯ ಬೆಂಬಲ ಪಡೆದಿದ್ದು ಕೇವಲ ಅಧಿಕಾರಕ್ಕಾಗಿ ಅಲ್ಲ: ಏಕನಾಥ್ ಶಿಂಧೆ

ಮುಂಬೈ: ಅಭಿವೃದ್ಧಿ ಹಾಗೂ ಹಿಂದುತ್ವಕ್ಕಾಗಿ ಬಿಜೆಪಿಯ ಬೆಂಬಲ ಪಡೆದಿದ್ದೇವೆ ಹೊತಾಗಿ ಕೇವಲ ಅಧಿಕಾರಕ್ಕಾಗಿ ಅಲ್ಲ. ಬಿಜೆಪಿ ನೀಡಿದ ಬೆಂಬಲದಿಂದಲೇ ನಾವು ಅಧಿಕಾರ ಹಿಡಿಯಲು ಸಾಧ್ಯವಾಯಿತು ಎಂದು ಮಹಾರಾಷ್ಟ್ರದ ನೂತನ ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ.

ಪ್ರಮಾಣ ವಚನ ಸ್ವೀಕಾರದ ಬಳಿಕ ನೀಡಿದ ಮೊದಲ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮಹಾವಿಕಾಸ್ ಅಘಾಡಿ ಸರ್ಕಾರದಲ್ಲಿ ಶಿವಸೇನಾ ಶಾಸಕರು ಕೆಲಸ ಮಾಡಲು ಕಷ್ಟಪಡುತ್ತಿದ್ದರು. ಕಾಂಗ್ರೆಸ್ ಮತ್ತು ಎನ್‌ಸಿಪಿ ಪ್ರಾಬಲ್ಯ ಸಾಧಿಸಿತ್ತು. ಉದ್ದವ್ ಠಾಕ್ರೆ ಹಿಂದುತ್ವದ ವಿಚಾರದಲ್ಲಿ ಮೊದಲಿನಂತಿರಲಿಲ್ಲ.

ಇದು ಬಹಳ ದೊಡ್ಡ ವಿಷಯ, ಕೇಂದ್ರ ಸರ್ಕಾರ ನಮ್ಮ ಜೊತೆಗೆ ಇದೆ. ಮುಖ್ಯವಾಗಿ ಯಾವುದೇ ತಪ್ಪು ಮಾಡಿಲ್ಲ. ಚುನಾವಣೆ ಪೂರ್ವದಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಇತ್ತು. ನಾವು ಈಗ ಅದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು 200 ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದ ಅವರು, ಫಡ್ನವಿಸ್ ಡಿಸಿಎಂ ಆಗಿರುವುದು ಅವರ ದೊಡ್ಡ ಮನಸ್ಸು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

06/07/2022 03:59 pm

Cinque Terre

115.8 K

Cinque Terre

10