ಅಮೃತಸರ: ಪಂಜಾಬ್ ಸಿಎಂ, 48 ವರ್ಷದ ಭಗವಂತ್ ಮಾನ್ ನಾಳೆ (ಗುರುವಾರ) ಚಂಡೀಗಢದ ತಮ್ಮ ಮನೆಯಲ್ಲಿ ಡಾ.ಗುರುಪ್ರೀತ್ ಕೌರ್ ಮದುವೆಯಾಗಲಿದ್ದಾರೆ.
ಮದುವೆ ಸಮಾರಂಭದಲ್ಲಿ ಭಗವಂತ್ ಮಾನ್ ಅವರ ಕುಟುಂಬ ಸದಸ್ಯರು ಹಾಗೂ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ. ಭಗವಂತ್ ಮಾನ್ ಅವರಿಗೆ ಇದು 2ನೇ ವಿವಾಹವಾಗಿದ್ದು, ಮೊದಲನೇ ಪತ್ನಿ ಇಂದರ್ಜೀತ್ ಕೌರ್ ಅವರಿಗೆ 2016ರಲ್ಲಿ ವಿಚ್ಛೇದನ ನೀಡಿದ್ದರು.
ಭಗವಂತ್ ಮಾನ್, ಇಂದ್ರರ್ಜೀತ್ ಕೌರ್ ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಚಂಡೀಗಢದಲ್ಲಿ ನಡೆಯುವ ಸಮಾರಂಭದಲ್ಲಿ ದೆಹಲಿ ಸಿಎಂ, ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
PublicNext
06/07/2022 03:24 pm