ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಡು ರಸ್ತೆಯಲ್ಲೇ ಶಾಸಕ ಹರ್ಷವರ್ಧನ್​ಗೆ ಜನರಿಂದ ತರಾಟೆ

ಮೈಸೂರು: ನಂಜನಗೂಡು ಕ್ಷೇತ್ರದ ಶಾಸಕ ಬಿ. ಹರ್ಷವರ್ಧನ್‌ ಹುಲ್ಲಹಳ್ಳಿ ಹೋಬಳಿಯ ಮಲ್ಲಹಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟ ವೇಳೆ ಗ್ರಾಮಸ್ಥರು ಕ್ಲಾಸ್​ ತೆಗೆದುಕೊಂಡಿದ್ದಾರೆ.

'ಮತಕ್ಕಾಗಿ ಬರ್ತೀರಾ, ಗ್ರಾಮದ ಅಭಿವೃದ್ಧಿ ಮಾಡಕ್ಕಾಗಲ್ವ. ಶಾಲಾ ಮಕ್ಕಳು ಓಡಾಡೋದು ಹೇಗೆ? ಮಳೆ ಬಂದರೆ ರಸ್ತೇಲಿ ಓಡಾಡಕ್ಕಾಗಲ್ಲ. ಕುಡಿಯುವ ನೀರು, ಚರಂಡಿ ವ್ಯವಸ್ಥೆಯೂ ಇಲ್ಲ. ನಿಮ್ಮ ಕಾರ್ಯಕ್ರಮಗಳು ಇದ್ದರೆ ಮಾತ್ರ ಇಲ್ಲಿಗೆ ಬರ್ತೀರಾ' ಎಂದು ಮಲ್ಲಹಳ್ಳಿ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಹುಲ್ಲಹಳ್ಳಿ, ನಂಜನಗೂಡು ಭಾಗಕ್ಕೆ ರಸ್ತೆ ಇಲ್ಲ. ದುರಸ್ತಿ ಮಾಡ್ತೀವಿ ಅಂತೀರಾ. ಆ ಮೇಲೆ ಇತ್ತ ತಿರುಗಿಯೂ ನೋಡಲ್ಲ ಎಂದು ರಸ್ತೆಯಲ್ಲೇ ತಡೆದು ನಿಲ್ಲಿಸಿ ಪ್ರಶ್ನಿಸಿದ್ದಾರೆ. ಇದರಿಂದ ಮುಜುಗರಕ್ಕೀಡಾದ ಶಾಸಕರು ರಸ್ತೆಯನ್ನು ಸರಿ ಮಾಡಿಸಿದ ಬಳಿಕ ಮತ ಕೇಳಲು ಬರ್ತೀನಿ ಎಂದು ಹರ್ಷವರ್ಧನ್ ಹೇಳಿದರು.

Edited By : Vijay Kumar
PublicNext

PublicNext

05/07/2022 04:41 pm

Cinque Terre

96.94 K

Cinque Terre

0

ಸಂಬಂಧಿತ ಸುದ್ದಿ