ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಹುಲ್ ಗಾಂಧಿ ಹೇಳಿಕೆ ತಿರುಚಿದ ಕೇಸ್‌: ಝೀ ನ್ಯೂಸ್‌ ನಿರೂಪಕ ರೋಹಿತ್ ರಂಜನ್ ಅರೆಸ್ಟ್

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆ ತಿರುಚಿದ ಪ್ರಕರಣದ ಸಂಬಂಧ ಜೀ ನ್ಯೂಸ್‌ನ ನಿರೂಪಕ ರೋಹಿತ್ ರಂಜನ್ ಅವರನ್ನು ಮಂಗಳವಾರ ಬೆಳಗ್ಗೆ ಬಂಧಿಸಲಾಗಿದೆ.

ನೋಯ್ಡಾ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ರಂಜನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಛತ್ತೀಸ್‌ಗಢ ಪೊಲೀಸರು ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿರುವ ರಂಜನ್ ಮನೆಗೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.

ಇದಕ್ಕೂ ಮುನ್ನ ರೋಹಿತ್ ರಂಜನ್ ಅವರು, "ಸ್ಥಳೀಯ ಪೊಲೀಸರಿಗೆ ತಿಳಿಸದೆ ನನ್ನನ್ನು ಬಂಧಿಸಲು ಛತ್ತೀಸ್‌ಗಢ ಪೊಲೀಸರು ನನ್ನ ಮನೆಯ ಹೊರಗೆ ನಿಂತಿದ್ದಾರೆ. ಇದು ಕಾನೂನುಬದ್ಧವಾಗಿದೆಯೇ” ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಸ್‌ಎಸ್‌ಪಿ ಗಾಜಿಯಾಬಾದ್ ಮತ್ತು ಎಡಿಜಿ ಲಕ್ನೋ ಅವರನ್ನು ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ಏನಿದು ಪ್ರಕರಣ?:

ಇತ್ತೀಚೆಗೆ ರಾಹುಲ್‌ ಗಾಂಧಿ ತಮ್ಮ ಸಂಸದೀಯ ಕ್ಷೇತ್ರ ಕೇರಳದ ವಯ್ನಾಡ್‌ಗೆ ತೆರಳಿದ್ದರು. ಕೆಲ ದಿನಗಳ ಹಿಂದೆ ಎಸ್‌ಎಫ್‌ಐ ಕಾರ್ಯಕರ್ತರು ರಾಹುಲ್‌ ಗಾಂಧಿ ಅವರ ಕಚೇರಿಯನ್ನು ಧ್ವಂಸ ಮಾಡಿದ್ದರು. ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಹುಲ್‌ ಗಾಂಧಿ, ಈ ಘಟನೆಯನ್ನು ಮಾಡಿದವರು ಮಕ್ಕಳು ಎಂದು ಹೇಳಿದ್ದರು. ಆದರೆ ಝೀ ನ್ಯೂಸ್‌ ಚಾನೆಲ್‌, ಇದು ರಾಹುಲ್‌ ಗಾಂಧಿ ಉದಯಪುರ ಘಟನೆಯ ಕುರಿತಾಗಿ ಹೇಳಿದ್ದ ಮಾತು ಎಂದು ಪರಿಗಣಿಸಿ ಸುದ್ದಿಯನ್ನು ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲಿಯೇ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ನಿರೂಪಕ ರೋಹಿತ್ ರಂಜನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Edited By : Vijay Kumar
PublicNext

PublicNext

05/07/2022 02:37 pm

Cinque Terre

121.52 K

Cinque Terre

5

ಸಂಬಂಧಿತ ಸುದ್ದಿ