ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿಯ ರಾಹುಲ್ ನಾರ್ವೇಕರ್ ಆಯ್ಕೆ

ಮುಂಬೈ: ಮಹಾರಾಷ್ಟ್ರ ನೂತನ ಸಿಎಂ ಏಕನಾಥ್​ ಶಿಂಧೆ ವಿಶ್ವಾಸಮತ ಸಾಬೀತು ಪಡಿಸಬೇಕಿರುವ 2 ದಿನ ವಿಶೇಷ ವಿಧಾನಸಭಾ ಅಧಿವೇಶನ ಆರಂಭಾಗಿದ್ದು, ಶಿಂಧೆ ಬಣದ ರಾಹುಲ್​ ನಾರ್ವೇಕರ್​ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿ-ಶಿವಸೇನೆ ಬಂಡಾಯ ಶಿಂಧೆ ಬಣ ಪ್ರಮುಖ ಮುನ್ನಡೆಯನ್ನು ಪಡೆದುಕೊಂಡಿದೆ.

ಬಿಜೆಪಿಯ ರಾಹುಲ್​ ನಾರ್ವೇಕರ್​ 164 ಮತಗಳನ್ನು ಪಡೆದುಕೊಂಡರೇ, ಶಿವಸೇನೆ-ಕಾಂಗ್ರೆಸ್ ಅಭ್ಯರ್ಥಿ ರಾಜನ್​ ಸಾಲ್ವಿ 107 ಮತಗಳನ್ನು ಪಡೆದುಕೊಂಡರು. ಚುನಾವಣೆ ಆರಂಭಕ್ಕೂ ಮುನ್ನ ಶಿವಸೇನೆಯ ಉದ್ಧವ್ ಠಾಕ್ರೆ ಹಾಗೂ ಸಿಎಂ ಏಕ​ನಾಥ್ ಶಿಂಧೆ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಶಾಸಕರು ವಿಪ್​ ಜಾರಿ ಮಾಡಿದ್ದರು.

Edited By : Vijay Kumar
PublicNext

PublicNext

03/07/2022 12:47 pm

Cinque Terre

72.3 K

Cinque Terre

3

ಸಂಬಂಧಿತ ಸುದ್ದಿ