ಹಾವೇರಿ: ರೈತ ಪರ ಹೋರಾಟಗಾರ್ತಿ ಮಂಜುಳಾ ಪೂಜಾರ್ ಕೆಂಡಾಮಂಡಲವಾಗಿದ್ದಾರೆ. ತಮ್ಮ ವಿರುದ್ಧ ನಡೆದ ಖಾಸಗಿ ವಾಹಿನಿಯ ಸ್ಟಿಂಗ್ ಆಪರೇಷನ್‌ವಿರುದ್ಧ ಈಗ ಮಂಜುಳಾ ಪೂಜಾರ್ ವೀಡಿಯೋ ಮೂಲಕವೇ ಹರಿಹಾಯ್ದಿದ್ದಾರೆ.
ಮಂಜುಳಾ ಪೂಜಾರ್ ಕೇವಲ ಆ ವಾಹಿನಿಯನ್ನ ಮನಸೋಯಿಚ್ಛೆ ಬೈದಿಲ್ಲ. ಬದಲಾಗಿ ರಾಜಕಾರಣಿಗಳನ್ನೂ ಮಂಜುಳಾ ಪೂಜಾರ್ ಬೈದು ಹಾಕಿದ್ದಾರೆ.
ರೈತರಿಗಾಗಿಯೇ ನಾನು ಹೋರಾಡಿದ್ದೇನೆ. ನಾನು ನನ್ನ ರೈತರ ರೊಕ್ಕ ಕೇಳಿಲಿಕ್ಕೆ ಹೋಗಿದ್ದೆ. ಅಷ್ಟೇ. ನನ್ನ ಸ್ಕ್ರೀನ್ ಟೆಸ್ಟ್ ಮಾಡ್ತೀಯಾ ? ಅಂತಲೇ ಅವಾಚ್ಯ ಶಬ್ಧಗಳಿಂದಲೂ ಬೈದು ಹಾಕಿದ್ದಾರೆ. ಅದೇ ವೀಡಿಯೋ ಈಗ ವೈರಲ್ ಆಗುತ್ತಿದೆ.
ನಾನು ಗಂಡು ಮೆಟ್ಟಿನ ನಾಡಿನಲ್ಲಿ ಹುಟ್ಟಿದ್ದೇನೆ. ನಾನು ಯಾರಿಗೂ ಹೆದರೋದಿಲ್ಲ ಅಂತಲೇ ನಿರಂತರವಾಗಿಯೇ ಮಂಜುಳಾ ಪೂಜಾರ್ ಬೈದುಹಾಕಿದ್ದಾರೆ.
PublicNext
02/07/2022 09:31 pm