ಹೈದ್ರಾಬಾದ್: ಬಿಜೆಪಿ ಹೈದ್ರಾಬಾದ್ ನಲ್ಲಿ ದೊಡ್ಡ ಕಾರ್ಯಕಾರಿಣಿ ಸಭೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ಮೋದಿ ಹೈದ್ರಾಬಾದ್‌ಗೆ ಆಗಮಿಸುತ್ತಿದ್ದಾರೆ.
ಪ್ರೋಟೋಕಾಲ್ ಪ್ರಕಾರ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮೋದಿ ಅವ್ರರನ್ನ ಸ್ವಾಗತಿಸಬೇಕು. ಆದರೆ, ಈ ಸಲವು ಕೆ.ಸಿ.ಆರ್ ಗೈರು ಆಗಿದ್ದಾರೆ. ಪ್ರೋಟೋಕಾಲ್ ಪ್ರಕಾರ ಐದು ತಿಂಗಳಲ್ಲಿ ಮೂರು ಬಾರಿ ಅವರನ್ನ ಭೇಟಿ ಆಗೋದಿಲ್ಲ. ಈ ಬಾರಿ ಪಶುಸಂಗೋಪನಾ ಸಚಿವ ತಲಸಾ ಶ್ರೀನಿವಾಸ್ ಅವ್ರೇ ಪ್ರಧಾನಿ ಮೋದಿಯನ್ನ ಸ್ವಾಗತಿಸಲಿದ್ದಾರೆ ಎಂದು ಕೆಸಿಆರ್ ಹೇಳಿದ್ದಾರೆ.
ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡೇ ಬಿಜೆಪಿ ಇಲ್ಲಿ ಕಾರ್ಯಕಾರಣಿ ಸಭೆ ನಡೆಸುತ್ತಿದೆ. ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡ ಎಲ್ಲರೂ ಬರ್ತಿದ್ದಾರೆ.
18 ವರ್ಷದ ಬಳಿಕ ಬಿಜೆಪಿ ಇಲ್ಲಿ ಕಾರ್ಯಕಾರಿಣಿ ಸಭೆ ನಡೆಸುತ್ತಿದೆ. 350 ಕ್ಕೂ ಹೆಚ್ಚು ಸದಸ್ಯರು ಈ ಸಭೆಯಲ್ಲಿ ಭಾಗಿ ಆಗುತ್ತಿದ್ದಾರೆ. ಜುಲೈ-02 ಮತ್ತು 03 ರಂದು ನಡೆಯೋ ಈ ಸಭೆ ಬಳಿಕ ಪ್ರಧಾನಿ ಮೋದಿ ಜುಲೈ-03 ರಂದು ಸಾರ್ವಜನಿಕ ಸಭೆಯಲ್ಲೂ ಮಾತನಾಡಲಿದ್ದಾರೆ. ಕೆ.ಸಿ.ಆರ್.ಸರ್ಕಾರದ ವರ್ತನೆ ಬಗ್ಗೆ ಬಿಜೆಪಿಗೆ ಅಸಮಾಧಾನ ಇದ್ದೇ ಇದೆ. ಆ ಎಲ್ಲ ವಿಚಾರಗಳು ಇಲ್ಲಿ ಅಕ್ರಮಣಕಾರಿಯಾಗಿಯೇ ಹೊರ ಬರಲಿವೆ.
PublicNext
02/07/2022 01:17 pm