ಬೆಂಗಳೂರು:ಬಿಜೆಪಿಯ ಪ್ರತಿ ವರ್ತನೆಯನ್ನು ಕಾಂಗ್ರೆಸ್ ಟೀಕಿಸುತ್ತದೆ. ವ್ಯಂಗ್ಯ ಮಾಡ್ತಾನೇ ಇರುತ್ತದೆ. ಪ್ರಧಾನಿ ಮೋದಿಯನ್ನೂ ಬಿಡದ ಕೈ ನಾಯಕರು, ಪ್ರಧಾನಿಯನ್ನ ಓಲೈಸೋ ಎಂಎಲ್ಎ, ಎಂಪಿಗಳನ್ನ ಬಿಡ್ತಾರೆಯೇ ? ಇಲ್ಲ ಬಿಡಿ. ಈಗ ಟ್ರೋಲ್ ಆಗ್ತಿರೋ ಕೈ ನಾಯಕರ ಒಂದು ಸ್ಟೇಟ್‌ಮೆಂಟ್ ಭಾರೀ ವೈರಲ್ ಆಗುತ್ತಿದೆ.
ತಮಿಳುನಾಡಿನ MLAಗಳು : ನಮ್ಮ ಮೇಲೆ ಹಿಂದಿ ಹೇರಬೇಡಿ, ನಮ್ಮ GST ಬಾಕಿ ಕೊಡಿ.
ಕನ್ನಡನಾಡ MLA & MPಗಳು: ಮೋದಿಯ ಹಿಂದೆ ಕೂರುವ ಭಾಗ್ಯ ನನ್ನದಾಯಿತು. ಮೋದಿ ನನ್ನ ಬೆನ್ನಿಗೆ ಗುದ್ದಿದರು, ಮೋದಿ ನನ್ನ ಚಿವುಟಿದರು , ಮೋದಿ ನನ್ನ ತಲೆ ಸವರಿದರು.
ಹೌದು. ಇತ್ತೀಚಿಗೆ ಮೈಸೂರಿಗೆ ಮೋದಿ ಬಂದಿದ್ದರು. ವಿಶ್ವ ಯೋಗದಿನಕ್ಕಾಗಿಯೇ ಇಲ್ಲಿದ್ದರು. ಆಗಲೇ ಬಿಜೆಪಿಯ ನಾಯಕರಾದ ರಾಮ್ ದಾಸ್ ಮತ್ತು ಎಂಟಿಬಿ ನಾಗರಾಜ್,ಮೋದಿ ಜೊತೆಗೆ ತಮಗಾದ ಅನುಭವ ಹಂಚಿಕೊಂಡಿದ್ದರು. ಮೋದಿ ನನಗೆ ಗುದ್ದಿದರು ಅಂತಲೇ ರಾಮ್‌ದಾಸ್ ಹೇಳಿಕೊಂಡಿದ್ದರು.
ಎಂಟಿಬಿ ನಾಗರಾಜ್ ಅಂತೂ ಮೋದಿಯ ಒಂದೇ ಒಂದು ಟಚ್ ಗೆ ನೀವೂ ಸಖತ್ ಫಿಟ್ ಆಗಿದ್ದೀರಿ. ಏನ್ ಊಟ ಮಾಡ್ತೀರಿ ಅಂತ ಮೋದಿ ಬೆರಳಿನಿಂದ ಕೇಳಿದ್ದಕ್ಕೆ ಪುಳಕಗೊಂಡಿದನ್ನ ಎಲ್ಲರಿಗೂ ಹೇಳಿದ್ದರು. ಇದೇ ರೀತಿ ಮೋದಿ ಹಿಂದೆ ಕೂರುವುದೇ ನನ್ನ ಭಾಗ್ಯ ಅಂತಲೂ ಹೇಳಿಕೊಂಡೋರು ಇದ್ದಾರೆ.
ಬಿಜೆಪಿಯ ಎಂಎಲ್‌ಎ-ಎಂಪಿಗಳ ಈ ವರ್ತನೆಯನ್ನ ಕಾಂಗ್ರೆಸ್ ಕಟುವಾಗಿಯೇ ಟೀಕಿಸಿದೆ. ತಮಿಳುನಾಡಿನ ಎಂಎಲ್ಎ, ಎಂಪಿಗಳು ಜನರಿಗೆ ಅಗತ್ಯ ಇರೋದನ್ನ ಕೇಳ್ತಾರೆ. ಆದರೆ, ಬಿಜೆಪಿಯ ಎಂಎಲ್‌ಎಗಳು,ಎಂಪಿಗಳು ಹೇಗೆಲ್ಲಾ ಆಡ್ತಾರೆ ನೋಡಿ ಅಂತಲೇ ಚುಚ್ಚಿದ್ದಾರೆ.
PublicNext
30/06/2022 11:50 am