ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಹಿಂದುತ್ವದ ವಿರುದ್ಧ ಮಾತನಾಡಿದವರನ್ನು ಕಂಡಲ್ಲಿ ಗುಂಡಿಕ್ಕಬೇಕು: ರೇಣುಕಾಚಾರ್ಯ

ದಾವಣಗೆರೆ: ಹಿಂದೂಗಳೇನೂ ಕೈಗೆ ಬಳೆ ತೊಟ್ಟಿಲ್ಲ. ಹಿಂದೂಗಳನ್ನ ಸೀಳಿದವರನ್ನು ನಾವು ಸೀಳಬೇಕು. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಆಗಲೇಬೇಕು. ಪ್ರತ್ಯುತ್ತರ ಕೊಟ್ಟಾಗ ಮಾತ್ರ ಎಲ್ಲ ಸುಮ್ಮನಿರುತ್ತಾರೆ. ಇಂತ ಅಯೋಗ್ಯರನ್ನ ಮಟ್ಟ ಹಾಕಬೇಕು ಎಂದು ಹೇಳುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನೂಪುರ್ ಶರ್ಮಾ ವಿವಾದಿತ ಹೇಳಿಕೆಯನ್ನ ಬೆಂಬಲಿಸಿದ್ದ ವ್ಯಕ್ತಿಯನ್ನ ಶಿರಚ್ಛೇದ ಮಾಡಿರುವ ಕೃತ್ಯ ಖಂಡಿಸಿದರಲ್ಲದೇ, ಹಂತಕರ ವಿರುದ್ಧ ಮುಯ್ಯಿಗೆ ಮುಯ್ಯಿ ಸೇಡಿಗೆ ಸೇಡು ತೀರಿಸಿಕೊಳ್ಳುವ ಮಾತುಗಳನ್ನಾಡಿದರು. ಹಿಂದುತ್ವದ ವಿರುದ್ಧ ಮಾತನಾಡಿದವರನ್ನು ಕಂಡಲ್ಲಿ ಗುಂಡಿಟ್ಟು ಹೊಡೆಯಬೇಕು. ಅಂದಾಗ ಮಾತ್ರ ಭಾರತ ಮಾತೆಗೆ ಗೌರವ ನೀಡಿದಂತಾಗುತ್ತದೆ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

Edited By : Nagesh Gaonkar
PublicNext

PublicNext

29/06/2022 07:23 pm

Cinque Terre

215.99 K

Cinque Terre

13

ಸಂಬಂಧಿತ ಸುದ್ದಿ