ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಚ್ಛೇದವೇ ಶಿಕ್ಷೆ ಎಂದು ಮದರಸಾಗಳಲ್ಲಿ ಮಕ್ಕಳಿಗೆ ಪಾಠ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಆರೋಪ

ತಿರುವನಂತಪುರಂ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕತ್ತು ಕತ್ತರಿಸಿದ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮದರಸಾಗಳನ್ನು ದೂಷಿಸಿದ್ದಾರೆ. "ಧರ್ಮನಿಂದನೆಗೆ ಶಿರಚ್ಛೇದ ಮಾಡುವುದೇ ಸೂಕ್ತ ಶಿಕ್ಷೆ ಎಂದು ಮದರಸಾಗಳಲ್ಲಿ ಮಕ್ಕಳಿಗೆ ಕಲಿಸಿ ಕೊಡಲಾಗುತ್ತಿದೆ" ಎಂದು ಅವರು ಬುಧವಾರ ಆರೋಪಿಸಿದ್ದಾರೆ.

ತಲೆ ಕತ್ತರಿಸುವುದು ದೇವರ ಕಾನೂನು ಎಂಬಂತೆ ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ. ಈ ಬೋಧನೆಗಳನ್ನು ಪರಿಶೀಲನೆ ಮಾಡುವ ಅಗತ್ಯವಿದೆ. ನಾವು ಲಕ್ಷಣಗಳು ಕಾಣಿಸಿಕೊಂಡಾಗ ಚಿಂತೆ ಮಾಡುತ್ತೇವೆ. ಆದರೆ ಆಳವಾದ ಕಾಯಿಲೆಯನ್ನು ಗುರುತಿಸಲು ನಿರಾಕರಿಸುತ್ತೇವೆ ಎಂದು ಅವರು ಈ ಕ್ರೌರ್ಯವು ಇನ್ನೂ ಆಳವಾಗಿ ಬೇರೂರಿದೆ ಎಂದಿದ್ದಾರೆ.

Edited By : Vijay Kumar
PublicNext

PublicNext

29/06/2022 07:08 pm

Cinque Terre

66.52 K

Cinque Terre

14

ಸಂಬಂಧಿತ ಸುದ್ದಿ