ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ನಾಳೆ ಜೂನ್-30ಕ್ಕೆ ವಿಶ್ವಾಸ ಮತ ಸಾಬೀತು ಪಡಿಸುವಂತೆ ರಾಜ್ಯ ಪಾಲ ಭರತ್ ಸಿಂಗ್ ಕೋಶಿಯಾರಿ ಆದೇಶ ಹೊರಡಸಿದ್ದಾರೆ. ಆದರೆ, ಇದನ್ನೇ ಪ್ರಶ್ನಿಸಿ ಶಿವಸೇನಾ ನಾಯಕ ಸಂಜಯ್ ರಾವತ್,ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.
ರಾಜ್ಯಪಾಲರು ನಾಳೆನೇ ವಿಶ್ವಾಸಮ ಸಾಬೀತು ಪಡೆಸುವಂತೆ ಸಿಎಂ ಉದ್ಧವ್ ಠಾಕ್ರೆಗೆ ಹೇಳಿದ್ದಾರೆ. ಆದರೆ, ನಮ್ಮ ಶಿವಸೇನಾದ 16 ಮಂದಿ ಶಾಸಕರ ಅನರ್ಹತೆ ವಿಚಾರ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿಯೇ ಇದೆ. ಹೀಗಿರೋವಾಗ ವಿಶ್ವಾಸಮತ ಸಾಬೀತು ಪಡಿಸಲು ಹೇಗೆ ಸಾಧ್ಯ. ಇದು ಕಾನೂನು ವಿರುದ್ಧವಾಗಿಯೇ ಇದೆ ಎಂದು ಸಂಜಯ್ ರಾವತ್ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡೋವಾಗ ಪ್ರಕ್ರಿತಿಕೆ ನೀಡಿದ್ದಾರೆ.
ಜುಲೈ-11 ರ ವರೆಗೂ ಶಿವಸೇನಾ ಶಾಸಕರ ಅನರ್ಹತೆ ವಿಷಯವನ್ನ ಸುಪ್ರೀ ಕೋರ್ಟ್ ಮುಂದೂಡಿದೆ. ಹೀಗಿರೋವಾಗ ರಾಜ್ಯಪಾಲರು ಬಹುಮತ ಸಾಬೀತುಪಡಿಸಿ ಎಂದು ಉದ್ಧವ್ ಠಾಕ್ರೆಗೆ ಹೇಗೆ ಕೇಳುತ್ತಾರೆ ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಟ್ವೀಟ್ ಮಾಡಿದ್ದಾರೆ.
PublicNext
29/06/2022 11:36 am