ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿ ಆಡಳಿತ ಮೆಚ್ಚಿಕೊಂಡ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಗ್ಗೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಬಿಡುಗಡೆಯಾಗಿರುವ ಮೋದಿ @20 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಪುಸ್ತಕದಲ್ಲಿ ನಾನೊಂದು ಲೇಖನ ಬರೆದಿದ್ದೇನೆ. ಅದರ ಹೆಸರು then comes the winds of change ಅಂತ. ನಾನು ಮೋದಿಯವರನ್ನು ಯಾವ ರೀತಿಯಲ್ಲೂ ಬಲ್ಲವಳಲ್ಲ. ನಾನು ಅತ್ಯಂತ ಸಾಮಾನ್ಯಳು. ಮೋದಿ ಅವರ ಜತೆ ನಾನು ಕೆಲಸವನ್ನು ಮಾಡಿಲ್ಲ. ಅವರಿರೋದು ದಿಲ್ಲಿ, ನಾನಿರೋದು ಹಳ್ಳಿ. ಅವರ ಬಗ್ಗೆ ಬರೆದುಕೊಡಿ ಅಂದಾಗ ಏನು ಬರೆಯಬೇಕೆಂದು ಗೊತ್ತಾಗ್ಲಿಲ್ಲ. ನನ್ನ ಬಳಿ‌ ಅಂಕಿ ಅಂಶಗಳೂ ಇರಲಿಲ್ಲ. ಹೀಗಾಗಿ ನನಗೆ ಗೊತ್ತಿರುವ ಮಾಹಿತಿಯನ್ನು ಬರೆದಿದ್ದೇನೆ ಎಂದಿದ್ದಾರೆ.

ಈ ಲೇಖನ ಬರೆಯುತ್ತಾ ಬರೆಯುತ್ತಾ ಮೋದಿಯವರನ್ನು ನೋಡುವ ದೃಷ್ಟಿಕೋನ ಬದಲಾಯಿತು. ಒಬ್ಬ ಮಹಾನ್ ನಾಯಕನ ಗುಣಗಳೇ ಬೇರೆ ಇರುತ್ತವೆ. ಗುಜರಾತ್ ಸಿಎಂ ಆಗಿ 12 ವರ್ಷ ಹಾಗೂ ಪ್ರಧಾನಿ ಆಗಿ 8 ವರ್ಷ. ಒಟ್ಟು 20 ವರ್ಷ ಮೋದಿ ನಿರಂತರ ಆಳ್ವಿಕೆ ಮಾಡಿದ್ದಾರೆ ಎಂದು ಸುಧಾ ಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ರಾಜ್ಯಪಾಲ ಗೆಹಲೋಟ್ ಭಾಗಿ, ಸಚಿವ ಸುನೀಲ್ ಕುಮಾರ್, ವಿ. ಸೋಮಣ್ಣ, ಬಿ.ಸಿ ಪಾಟೀಲ್, ಶಾಸಕ ಉದಯ್ ಗರುಡಾಚಾರ್ ಭಾಗಿಯಾಗಿದ್ದರು.

Edited By : Nagaraj Tulugeri
PublicNext

PublicNext

28/06/2022 12:42 pm

Cinque Terre

28.74 K

Cinque Terre

5