ಬೆಂಗಳೂರು: ದಲಿತರು ಯಾಕೆ ಸಿಎಂ ಆಗಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.ತುಮಕೂರಿನ ಕಾಂಗ್ರೆಸ್ ಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಪ್ರತಿ ಜಿಲ್ಲೆಯಲ್ಲಿ ಆಯಾ ಜಿಲ್ಲೆಯ ರೈತರ, ಸಾಮಾಜಿಕ, ಮಹಿಳೆಯ ಸಮಸ್ಯೆ ಕುರಿತ ಚಿಂತನ- ಮಂಥನ ನಡೆಯುತ್ತಿದೆ. ರಾಷ್ಟ್ರಮಟ್ಟದಲ್ಲಿ ಸಭೆ ಆಗಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಸಭೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ದಲಿತ ಸಿಎಂ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದಲಿತರು ಯಾಕೆ ಸಿಎಂ ಆಗಬಾರದು? ಆದರೆ ಇಲ್ಲಿ ಸಭೆಯಲ್ಲಿ ದಲಿತ ಸಿಎಂ ಕುರಿತ ಚರ್ಚೆ ಆಗೋದಿಲ್ಲ. ಪಕ್ಷಕ್ಕೆ ಏನೆಲ್ಲ ಅನೂಕೂಲ ಆಗಬೇಕು ಅದು ಚರ್ಚೆ ಆಗುತ್ತದೆ ಎಂದು ಹೇಳಿದ್ದಾರೆ.
ಇ.ಡಿ. ಚಾರ್ಜ್‌ಶೀಟ್ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚಾರ್ಜ್‌ಶೀಟ್ ನಾನು ನೋಡಿಲ್ಲ. ನಾನು ಜೈಲಲ್ಲಿ ಇದ್ದಾಗಲೇ ಚಾರ್ಜ್‌ಶೀಟ್ ಹಾಕಬಹುದಿತ್ತು. ಆದರೆ ಅವರು ಹಾಕಿಲ್ಲ. ಈಗ ರಾಜಕಾರಣ ಮಾಡುತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
PublicNext
27/06/2022 04:11 pm