ಮುಂಬೈ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ರೀತಿನೇ ಆಗಿದೆ. ದಿನಕ್ಕೊಂದು ಟ್ವಿಸ್ಟ್ ತೆಗೆದುಕೊಳ್ಳುತ್ತಲೇ ಇದೆ. ಅದರಂತೆ ಈಗ ಈ ಬಿಕ್ಕಟ್ಟು ಕೋರ್ಟ್ ಮೆಟ್ಟಿಲೇರಿ ಬಿಟ್ಟಿದೆ.
ಹೌದು. ಶಿವಸೇನಾದ ರೆಬಲ್ ನಾಯಕ ಏಕನಾಥ್ ಶಿಂಧೆ ಕ್ಯಾಂಪ್ ಈಗ ಸುಪ್ರೀಂ ಕೋರ್ಟ್ ನಲ್ಲಿ ಎರಡು ಪ್ರತ್ಯೇಕ ಅರ್ಜಿ ಸಲ್ಲಿಕೆ ಮಾಡಿದೆ. ಇಂದು ಈ ಅರ್ಜಿಗಳ ವಿಚಾರಣೆ ನಡೆಯಲಿದೆ.
ಈ ಒಂದು ಕಾನೂನು ಸಮರ ಒಂದು ಕಡೆ ನಡೆದಿದ್ದರೇ, ಇನ್ನೊಂದು ಕಡೆಗೆ ಪವರ್ & ಪಾಲಿಟಿಕ್ಸ್ ಅಸ್ತ್ರವೂ ಜಾರಿಯಲ್ಲಿಯೇ ಇದೆ. ಅಘಾಡಿ ಸರ್ಕಾರದ ವಿರುದ್ಧ ಏಕನಾಥ್ ಶಿಂಧೆ ಹಿಂದುತ್ವದ ಅಸ್ತ್ರವನ್ನೂ ಪ್ರಯೋಗಿಸುತ್ತಿದ್ದಾರೆ.
ಆದರೆ, ಠಾಕ್ರೆ ಬಣ ಇದಕ್ಕೆ ಸುಮ್ಮನೆ ಕುಳಿತಿಲ್ಲ. ಅದು ಕೂಡ ತಿರುಗೇಟು ನೀಡಿದೆ. ಸಾಮ,ದಾನ,ಬೇಧ ಹಾಗೂ ದಂಡದಂತಹ ಅಸ್ತ್ರಗಳನ್ನೂ ಪ್ರಯೋಗಿಸುತ್ತಿದೆ.
PublicNext
27/06/2022 07:43 am