ನವದೆಹಲಿ: ವಿವಿಧ ಏಳು ರಾಜ್ಯಗಳ ವಿಧಾನಸಭಾ ಕ್ಷೇತ್ರ ಮತ್ತು ಮೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಇತ್ತೀಚಿಗೆ ನಡೆದಿತ್ತು. ಇವತ್ತು ಈ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ.
ಉತ್ತರ ಪ್ರದೇಶದ ಅಜಾಂಘರ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ದಿನೇಶ್ ಲಾಲ್ ಯಾದವ್,ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ವಿರುದ್ಧ 10 ಸಾವಿರ ಮತಗಳಿಂದ ಗೆದ್ದು ಬೀಗಿದ್ದಾರೆ.
ಇನ್ನು ರಾಂಪುರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗಾನ್‌ಶಾಮ್ ಸಿಂಗ್,40 ಸಾವಿರ ಮತಗಳ ಅಂತರದಿಂದಲೇ ಸಮಾಜವಾದಿ ಪಕ್ಷದ ಮಹಮ್ಮದ್ ಆಸೀಮ್ ರಾಜ್ ವಿರುದ್ಧ ಭಾರೀ ಜಯ ಸಾಧಿಸಿದ್ದಾರೆ.
ಈ ಮೂಲಕ ಸಮಾಜವಾದಿ ಪಕ್ಷದ ನಿರೀಕ್ಷೆ ಸುಳ್ಳಾಗಿದೆ. ಅಖಿಲೇಶ್ ಯಾದವ್‌ಗೆ ಮುಖಭಂಗವಾಗಿದೆ.
PublicNext
26/06/2022 07:18 pm