ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಜರಾತ್ ಗಲಭೆ-ಮೋದಿ ಮೌನವಾಗಿಯೇ ಎಲ್ಲ ಸಹಿಸಿಕೊಂಡ್ರು !

ನವದೆಹಲಿ: ಗುಜರಾತ ಗಲಭೆ ಪ್ರಕರಣ ಸಂಬಂಧಿಸಿದಂತೆ ಅನೇಕರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಅವ್ರು ತುಂಬಾ ನೊಂದಿದ್ದಾರೆ. ಇದನ್ನ ನಾನು ತುಂಬಾ ಹತ್ತಿರದಿಂದಲೇ ನೋಡಿದ್ದೇನೆ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವ್ರು ದೊಡ್ಡ ನಾಯಕರು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಮಾತು ಆಡಲಿಲ್ಲ. ಆದರೆ, ಮೋದಿ ತುಂಬಾ ನೊಂದುಕೊಂಡಿದ್ದರು. ತುಂಬಾ ಗಟ್ಟಿಮುಟ್ಟಾದ ವ್ಯಕ್ತಿ ಮಾತ್ರ ಇದನ್ನೆಲ್ಲ ಸಹಿಸಿಕೊಳ್ಳಬಲ್ಲ ಎಂದು ಅಮಿತ್ ಷಾ ಹೇಳಿಕೊಂಡಿದ್ದಾರೆ.

ಆದರೆ, ಇಂದು ಸತ್ಯ ಹೊರಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿದ್ದಾಗ ಎಂದು ಮಧ್ಯ ಪ್ರವೇಶಿಸಲೇ ಇಲ್ಲ. ಈಗ ಎಲ್ಲ ಸತ್ಯವೂ ಹೊರ ಬಿದ್ದಿದೆ ಎಂದು ಅಮಿತ್ ಷಾ ತಿಳಿಸಿದರು. ಇನ್ನು ಮೋದಿ ಅವ್ರಿಗೆ ಈ ಗುಜರಾತ್ ಗಲಭೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದೆ.

Edited By :
PublicNext

PublicNext

25/06/2022 03:05 pm

Cinque Terre

36.2 K

Cinque Terre

7

ಸಂಬಂಧಿತ ಸುದ್ದಿ