ಮುಂಬೈ: ಬಿಜೆಪಿಯ ಕೇಂದ್ರ ನಾಯಕರಿಂದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಬೆದರಿಕೆ ಬರುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಂಜಯ್ ರಾವುತ್, "ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಇಲ್ಲಿ ಕೇಳಿ. ನಿಮ್ಮ ಕೆಲವು ಮುಖಂಡರು ಶರದ್ ಪವಾರ್‌ಗೆ ಬೆದರಿಕೆ ಹಾಕುತ್ತಿದ್ದಾರೆ. ಇದು ಈಗ ಕಾನೂನು ಸಮರವಾಗಿದೆ. ಇದುವರೆಗೆ ಶಿವಸೈನಿಕರು ರಸ್ತೆಗೆ ಇಳಿದಿಲ್ಲ. ಅಗತ್ಯ ಬಿದ್ದರೆ ನಾವು ಬೀದಿಗೆ ಇಳಿಯಬೇಕಾಗುತ್ತದೆ" ಎಂದು ಶಿವಸೇನಾ ಸಂಸದ, ಹಿರಿಯ ನಾಯಕ ಸಂಜಯ್ ರಾವುತ್ ಎಚ್ಚರಿಕೆ ನೀಡಿದ್ದಾರೆ.
"ಎಂವಿಎ ಸರಕಾರವನ್ನು ರಕ್ಷಿಸಲು ಪ್ರಯತ್ನಿಸಿದರೆ ಶರದ್ ಪವಾರ್‌ಗೆ ಮನೆಗೆ ಹೋಗಲು ಬಿಡಲ್ಲ ಅಂತ ಕೇಂದ್ರ ಸಚಿವರು ಬೆದರಿಕೆ ಹಾಕುತ್ತಾರೆ. ಎಂವಿಎ ಸರಕಾರ ಉಳಿಯುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಶರದ್ ಪವಾರ್ ಬಗ್ಗೆ ಈ ರೀತಿ ಮಾತನಾಡುವುದು ತರವಲ್ಲ" ಎಂದು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
PublicNext
24/06/2022 08:17 pm