ತುಮಕೂರು: ಜೆಡಿಎಸ್‌ನ ಉಚ್ಛಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ತಮ್ಮನ್ನ ಉಚ್ಛಾಟಿಸಿರೋದು ಒಳ್ಳೆಯದೇ ಆಯಿತು ಅಂತಲೇ ಸಂತೋಷದಿಂದಲೇ ಈಗ ಹೇಳಿಕೊಂಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿರೋ ಇವ್ರು, ಇದೇ ಡಿಸೆಂಬರ್ ತಿಂಗಳಲ್ಲಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಆದರೆ, ಈ ಒಂದು ಉಚ್ಛಾಟನೆ ನನಗೆ ಅವಮಾನ ಅಥವಾ ಮುಜುಗರ ಅಂತ ಅನಿಸಿಯೇ ಇಲ್ಲ ಅಂತಲೇ ಶ್ರೀನಿವಾಸ ತಿಳಿಸಿದ್ದಾರೆ.
ಅವರು ನನ್ನ ವಿರುದ್ಧ ಮತ್ತೊಬ್ಬ ಅಭ್ಯರ್ಥಿಯನ್ನ ತಯಾರಿ ಮಾಡಿದಾಗಲೇ, ನಾನು ಉಚ್ಛಾಟಿತನಾಗಿದ್ದೆ. ನಾನು ರಾಜೀನಾಮೆ ನೀಡಿದ ಬಳಿಕವೇ ಮುಂದಿನ ನಿರ್ಧಾರ ತಿಳಿಸುತ್ತೇನೆ ಅಂತಲೇ ಶ್ರೀನಿವಾಸ ಹೇಳಿದ್ದಾರೆ.
PublicNext
23/06/2022 03:33 pm