ಮುಂಬೈ : ಬಂಡಾಯದ ಬಿಸಿಗೆ ತತ್ತರಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನ ಉದ್ಧವ್ ಠಾಕ್ರೆ , ಸರಕಾರ ಉಳಿಸಲು ತಾವು ಸಿ.ಎಂ ಕುರ್ಚಿ ತ್ಯಜಿಸಲು ಸಿದ್ಧ ಹೇಳಿದ್ದಾರೆ. ಇಷ್ಟು ಮಾತ್ರವಲ್ಲ ತಮ್ಮಕುಟುಂಬದೊಂದಿಗೆ ಸರಕಾರಿ ಅಧಿಕೃತ ನಿವಾಸವನ್ನು ಖಾಲಿ ಮಾಡಿ ತಮ್ಮ ಮಾತೋಶ್ರೀ ಬಂಗ್ಲೆಗೆ ಆಗಮಿಸಿದ್ದಾರೆ.
ಉದ್ಧವ್ ಠಾಕ್ರೆ ವಿರುದ್ಧ ಬಂಡಾಯದ ಬಾವುಟ ಬೀಸಿರುವ ಏಕನಾಥ್ ಶಿಂಧೆ ಗುಂಪಿಗೆ ಸೇರಲು ಮತ್ತೇ ನಾಲ್ವರು ಶಿವಸೇನಾ ಶಾಸಕರು ಗುವಾಹಟಿ ತಲುಪಿದ್ದಾರೆ.
ಫೇಸ್ ಬುಕ್ ಮೂಲಕ ಸಂದೇಶ ರವಾನಿಸಿರುವ ಉದ್ಧವ್, ಬಂಡುಕೋರರು ಬಯಸಿದರೆ ತಾವು ಸಿ.ಎಂ ಕುರ್ಚಿ ಬಿಡಲು ರೆಡಿ. ಆದ್ರೆ ಎಲ್ಲರೂ ಮುಂಬೈಗೆ ಮರಳಿ ಬರಬೇಕು ಎಂದು ಮನವಿ ಮಾಡಿದ್ದಾರೆ.
ಭ್ರಷ್ಟಾಚಾರ ಆರೋಪ ಹೊತ್ತು ಜೈಲು ಪಾಲಾಗಿರುವ ಅನಿಲ್ ದೇಶಮುಖ್ ಹಾಗೂ ನವಾಬ್ ಮಲ್ಲಿಕ್ ರಿಂದ ಶಿವಸೇನೆ ನೇತೃತ್ವದ ಅಘಾಡಿ ಸರಕಾರಕ್ಕೆ ಸಾಕಷ್ಟು ಮುಜುಗರವುಂಟಾಗಿದೆ. ಆದ್ರ ಸಿ.ಎಂ ಉದ್ಧವ್ ಠಾಕ್ರೆ ಇಂತಹವನ್ನು ಬೆಂಬಲಿಸುತ್ತಿರುವುದರಿಂದ ಅನಿವಾರ್ಯವಾಗಿ ತಾವು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಶಿಂಧೆ ಗುಂಪು ಹೇಳಿಕೊಂಡಿದೆ.
PublicNext
23/06/2022 10:48 am