ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಪ್ರಯಾಣದ ಮಧ್ಯೆ ಮಕ್ಕಳೊಂದಿಗೆ ಮಜಾ ಉಡಾಯಿಸಿದ ಶಾಸಕ ರೇಣುಕಾಚಾರ್ಯ

ಹೊನ್ನಾಳಿ: ಮಾಜಿ ಸಚಿವ ಹಾಲಿ ಶಾಸಕ ಸದಾ ಸುದ್ದಿಯಲ್ಲಿರ್ತಾರೆ. ಈ ಬಾರಿ ಪ್ರಯಾಣದ ಮಧ್ಯೆ ತಮ್ಮದೇ ಕ್ಷೇತ್ರದಲ್ಲಿ ಕಾರು ನಿಲ್ಲಿಸಿ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ರಸ್ತೆ ಬದಿ ರೇಣುಕಾಚಾರ್ಯ ನಿಂತಿದ್ದನ್ನು ನೋಡಿದ ಮಕ್ಕಳು ಅಲ್ಲಿ ಮುಗಿಬಿದ್ದಿದ್ದಾರೆ‌‌. ಮಕ್ಕಳು ಸೇರಿದ ಮೇಲೆ ರೇಣುಕಾಚಾರ್ಯ ತಾವೇ ಮುಂದಾಗಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವೇಳೆ ಹೊನ್ನಾಳಿ ಹುಲಿಗೆ ಜೈ ಎಂದ ಮಕ್ಕಳು ಶಾಸಕರಿಗೆ ಜೈಕಾರ ಹಾಕಿದ್ದಾರೆ. ಏ..ನನಗ್ಯಾಕ್ರಪ್ಪ ಹುಲಿ ಅಂತೀರಿ? ಎಂದು ಪ್ರಶ್ನಿಸಿದ ರೇಣುಕಾಚಾರ್ಯ ನೀವೆಲ್ಲ ಚೆನ್ನಾಗಿ ಓದಬೇಕು. ಒಳ್ಳೆ ಅಂಕ ಗಳಿಸಬೇಕು. ಉತ್ತಮ ಕೆಲಸ ಮಾಡ್ಬೇಕು ಎಂದು ಕಿವಿಮಾತು ಹೇಳಿದ್ದಾರೆ. ಈ ಎಲ್ಲ ಮಾತುಗಳನ್ನು ಕೇಳಿಸಿಕೊಂಡ ಆ ಹುಡುಗರು ಹು ಸಾರ್ ಎಂದು ಒಕ್ಕೊರಲಿನಿಂದ ಹೇಳಿವೆ.

Edited By : Nagaraj Tulugeri
PublicNext

PublicNext

22/06/2022 11:00 pm

Cinque Terre

70.41 K

Cinque Terre

1

ಸಂಬಂಧಿತ ಸುದ್ದಿ