ಅಸ್ಸಾಂ: ಮಹಾರಾಷ್ಟ್ರದ ರಾಜಕೀಯದಲ್ಲಿ ಏನೇನೋ ಆಗುತ್ತಿದೆ. ಶಿವಸೇನಾ ನಾಯಕ ಏಕನಾಥ್ ಶಿಂಧೆ ಹಿಂದೆ ಹೋದ ಇಬ್ಬರು ಶಿವಸೇನಾ ಶಾಸಕರು ವಾಪಸ್ ಬಂದು ಸಿಎಂ ಉದ್ಧವ್ ಠಾಕ್ರೆಗೆ ಬೆಂಬಲ ಸೂಚಿಸಿದ್ದಾರೆ.
ಆದರೆ, ಇತ್ತ ಗುಜರಾತ್ ನ ಸೂರತ್ ರೆಸಾರ್ಟ್ ನಲ್ಲಿದ್ದ ಏಕನಾಥ್ ಶಿಂಧೆ ಮತ್ತು ಎಂಎಲ್ ಎ ಗಳು ಈಗ ಇಲ್ಲಿಂದ ಅಸ್ಸಾಂನ ಗುಹಾಹಟಿಗೆ ಬಂದು ತಲುಪಿದ್ದಾರೆ.
ಎಂಎಲ್ ಎಗಳೊಂದಿಗೆ ಸದ್ಯ ಏಕನಾಥ ಶಿಂಧೆ ಇಲ್ಲಿಯ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರೊಟ್ಟಿಗೆ ಅದೇನೋ ಮಹತ್ವದ ಪತ್ರಗಳಿಗೂ ಸಹಿಹಾಕಿ ಕೊಡ್ತಿದ್ದಾರೆ. ಆ ದೃಶ್ಯದ ವೀಡಿಯೋ ಈಗ ಟ್ವಿಟರ್ ನಲ್ಲೂ ಶೇರ್ ಆಗಿದೆ.
PublicNext
22/06/2022 09:56 pm