ಬೆಂಗಳೂರು: ಈ ದೇಶದಲ್ಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ದೇಶದ ಕಾನೂನಿಗಿಂತ ದೊಡ್ಡವರಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್ ನಿಂದ ಯಾರನ್ನೆ ನಿಲ್ಲಿಸಿದ್ರು ಗೆಲ್ತಾವೆ ಎಂಬ ವಾತಾವರಣವಿತ್ತು. ಸರ್ವಾಧಿಕಾರಿ, ದುರಹಂಕಾರಿಯಾಗಿದ್ದರು, ಆದರೆ ಇವತ್ತು ಬದುಕಿಲ್ಲ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಮೋದಿ ಸರ್ಕಾರ ಟಾರ್ಗೆಟ್ ಮಾಡಿಲ್ಲ. ಸುಬ್ರಹ್ಮಣ್ಯ ಸ್ವಾಮಿ ಹಾಕಿದ್ದ ಪಿಎಎಲ್ ವಿಚಾರಣೆಗೆ ಬಂದಿದೆ. ಕೋರ್ಟ್ ಗಿಂತ ಯಾರು ದೊಡ್ಡವರಲ್ಲ. ರಾಹುಲ್ ಗಾಂಧಿ ಏನ್ ಪ್ರಧಾನ ಮಂತ್ರಿಗಳಾ ಎಂಬುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಹೋರಾಟದ ವಿಚಾರವಾಗಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹೋರಾಟ ಮಾಡಿದ್ರು. ರಾಜಭವನ ಮುತ್ತಿಗೆ ಹಾಕಿದ್ರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ದೇಶದ ಕಾನೂನಿಗಿಂತ ದೊಡ್ಡವರಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್ ನಿಂದ ಯಾರನ್ನೆ ನಿಲ್ಲಿಸಿದ್ರು ಗೆಲ್ತಾವೆ ಎಂಬ ವಾತಾವರಣವಿತ್ತು. ಸರ್ವಾಧಿಕಾರಿ, ದುರಹಂಕಾರಿಯಾಗಿದ್ದರು, ಆದರೆ ಇವತ್ತು ಬದುಕಿಲ್ಲ.. ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಏರಿದ್ರು. ಅಂದು ಜನಸಂಘದವರನ್ನು, ಸಮಾಜವಾದಿಗಳನ್ನು ಸೇರಿದಂತೆ ಕಾಂಗ್ರೆಸ್ ವಿರುದ್ಧ ಯಾರೆಲ್ಲ ಇದ್ದರೂ ಅವರನ್ನು ಬಂಧಿಸಿರಲಿಲ್ಲವಾ. 5-6 ತಿಂಗಳು ಜೈಲಿಗೆ ಹಾಕಿರಲಿಲ್ಲವಾ.? ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಮೋದಿ ಸರ್ಕಾರ ಟಾರ್ಗೆಟ್ ಮಾಡಿಲ್ಲ. ಸುಬ್ರಹ್ಮಣ್ಯ ಸ್ವಾಮಿ ಹಾಕಿದ್ದ ಪಿಐಎಲ್ ವಿಚಾರಣೆಗೆ ಬಂದಿದೆ. ಕೋರ್ಟ್ ಗಿಂತ ಯಾರು ದೊಡ್ಡವರಲ್ಲ. ರಾಹುಲ್ ಗಾಂಧಿ ಏನು ಪ್ರಧಾನಮಂತ್ರಿಗಳಾ.? ಮೋದಿ ಅವರು ಸಿಎಂ ಆಗಿದ್ದಾಗ ಹಾಗೂ ಅಮೀತ್ ಶಾ ಅವರನ್ನು ಟಾರ್ಗೆಟ್ ಮಾಡಿರಲಿಲ್ಲವಾ…? ಕಾಂಗ್ರೆಸ್ ಆತ್ಮಾವಲೋಕ ಮಾಡಿಕೊಳ್ಳಬೇಕು ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.
PublicNext
22/06/2022 03:31 pm