ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಭುಗಿಲೆದ್ದಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಮಹಾರಾಷ್ಟ್ರ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತ ಫಡ್ನವೀಸ್ ಅವರು ಹಾಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಕೆಲವೇ ಗಂಟೆಗಳಲ್ಲಿ ತಮ್ಮ ಟ್ವೀಟ್ ಡಿಲೀಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
'ಒಮ್ಮೆ ದುಷ್ಟ ರಾಜನಿದ್ದನು' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅಮೃತಾ, ಪರೋಕ್ಷವಾಗಿ ಉದ್ಧವ್ ಠಾಕ್ರೆಯನ್ನು ದುಷ್ಟ ರಾಜ ಎಂದು ಹೋಲಿಕೆ ಮಾಡಿದ್ದಾರೆ. ಇದಾದ ಕೆಲವೇ ಸಮಯದಲ್ಲಿ ಆ ಟ್ವೀಟ್ ಅನ್ನು ಅಮೃತಾ ಅವರು ಡಿಲೀಟ್ ಮಾಡಿದ್ದಾರೆ. ಏಕೆ ಡಿಲೀಟ್ ಮಾಡಿದರು ಎಂಬುದಕ್ಕೆ ಅವರೇ ಸ್ಪಷ್ಟನೇ ನೀಡಬೇಕಿದೆ. ಆದರೂ, ಅವರು ಮಾಡಿರುವ ಟ್ವೀಟ್ನ ಸ್ಕ್ರೀನ್ ಶಾಟ್ ಎಲ್ಲೆಡೆ ವೈರಲ್ ಆಗಿದೆ.
PublicNext
22/06/2022 01:54 pm