ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರ ಉಳಿಯುತ್ತಾ ಬೀಳುತ್ತಾ ?

ಮುಂಬೈ:ಉದ್ದವ್ ಠಾಕ್ರೆ ಸರ್ಕಾರ ಈಗ ಪತನದ ಭೀತಿ ಎದುರಿಸುತ್ತಿದೆ. 21 ಶಿವಸೇನಾ ಶಾಸಕರೊಂದಿಗೆ ಸಚಿವ ಏಕನಾಥ್ ಶಿಂಧೆ ಈ ಭಯ ಹುಟ್ಟಿಸಿದ್ದಾರೆ.

ಹೌದು. ಮಹರಾಷ್ಟ್ರ ವಿಧಾನಸಭೆಯಲ್ಲಿ 288 ಸದಸ್ಯರ ಬಲ ಇದೆ. ಇದರಲ್ಲಿ ಒಬ್ಬ ಶಾಸಕರು ನಿಧನ ಹೊಂದಿದ್ದಾರೆ. ಈ ಕಾರಣಕ್ಕೆ ಈಗ ಸದಸ್ಯರ ಸಂಖ್ಯೆ 287 ಆಗಿದೆ.ಆದರೆ, ವಿಧಾನಸಭೆಯಲ್ಲಿ ಬಹುಮತ ಪಡಿಸಲು 144 ಸದಸ್ಯರ ಬಲ ಬೇಕಾಗುತ್ತದೆ.

ಮಹಾ ವಿಕಾಸ ಅಘಾಡಿ ಸರ್ಕಾರ ಒಟ್ಟು 152 ಶಾಸಕರನ್ನ ಹೊಂದಿದೆ. ಇದರಲ್ಲಿ ಶಿವಸೇನಾ, ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಶಾಸಕರೇ ಇದ್ದಾರೆ. ಇದರಲ್ಲಿ ಶಿವಸೇನಾ ಸದಸ್ಯರು 55 ಇದ್ದಾರೆ. ಇದರಲ್ಲಿಯೇ ಶಿವಸೇನಾ ಹಾಗೂ

ಪಕ್ಷೇತರ ಸೇರಿ 21 ಶಾಸಕರು ಗುಜರಾತ್‌ನ ರೆಸಾರ್ಟ್‌ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಒಂದು ವೇಳೆ ಇವರು ಸಚಿವ ಶಿಂಧೆ ರಾಜೀನಾಮೆ ನೀಡಿದಲ್ಲಿ, ಶಿವಸೇನಾ ಸಂಖ್ಯಾ ಬಲ 34ಕ್ಕೆ ಕುಸಿಯಲಿದೆ. ಇದರಿಂದ ವಿಧಾನಸಭೆಯಲ್ಲಿ ಮಹಾ ವಿಕಾಶ ಅಘಾಡಿ ಸರ್ಕಾರದ ಬಲ 131ಕ್ಕೆ ಇಳಿದು ಬಿಡುತ್ತದೆ.22 ಶಾಸಕರು ಒಂದು ವೇಳೆ ರಾಜೀನಾಮೆ ನೀಡಿದಲ್ಲಿ,ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 133 ಶಾಸಕರ ಬೆಂಬಲ ಅಗತ್ಯ ಬೀಳುತ್ತದೆ.

ಈ ಬೆಳವಣಿಗೆ ಬಳಿಕ ಬಿಜೆಪಿ ಪಕ್ಷದ ಬಲ 135ಕ್ಕೆ ಏರಿಕೆ ಆಗುತ್ತಿದ್ದು,ಶಿವಸೇನಾ 21 ಶಾಸಕರು ಪಕ್ಷಾಂತರ ಮಾಡಲು ಮುಂದಾದರೆ, ಅಲ್ಲಿಗೆ ಅವ್ರೆಲ್ಲ ಪಕ್ಷಾಂತರ ನಿಗ್ರಹ ಕಾಯ್ದೆ ಅಡಿ ರಾಜೀನಾಮೆ ನೀಡಬೇಕಾಗುತ್ತದೆ. ಮತ್ತೊಮ್ಮೆ 21 ಕ್ಷೇತ್ರದಲ್ಲಿ ಚುನಾವಣೆ ನಡೆಸಲೇಬೇಕಾಗುತ್ತದೆ.

Edited By :
PublicNext

PublicNext

21/06/2022 06:36 pm

Cinque Terre

35.46 K

Cinque Terre

11

ಸಂಬಂಧಿತ ಸುದ್ದಿ