ಅಲೀಗಢ: ಉತ್ತರ ಪ್ರದೇಶದ ಸಂಸದರೊಬ್ಬರು ವಧು ಒಬ್ಬಳಿಗೆ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ. ಮದುವೆ ಅಂದ್ಮೆಲೆ ಚಿನ್ನ,ಬೆಳ್ಳಿ, ಫೋಟೋ ಫ್ರೇಮ್ ಹೀಗೆ ಅನೇಕ ಗಿಫ್ಟ್ ಕೊಟ್ಟಿದ್ದಾರೆ. ಆದರೆ, ಸಂಸದ ಸತೀಶ್ ಗೌತಮ್ ಅವ್ರು ಕೊಟ್ಟಿರೋ ಗಿಫ್ಟ್ ಅನ್ನ ಇಲ್ಲಿವರೆಗೂ ಯಾರೂ ಕೊಟ್ಟೆ ಇಲ್ಲ.
ಸಂಸದರಿಂದ ವಿಶೇಷ ಉಡುಗೊರೆ ಪಡೆದ ವಧುವಿನ ಹೆಸರು ಪ್ರಿಯಾಂಕಾ ಶರ್ಮಾ.ಅಲಿಗಢನ ಖೈರ್ ತಹಸಿಲ್ ಪ್ರದೇಶದ ಕಸಿಸೋ ಗ್ರಾಮದ ಯುವತಿ.
ಈ ವಧುವಿಗೆ ಸಂಸದ ಕೊಟ್ಟ ಉಡುಗೊರೆ ಏನ್ ಗೊತ್ತೇ. ಹೌದು. ವಧುವಿನ ಮನೆ ಬಳಿ ಇರೋ 120 ಮೀಟರ್ ಉದ್ದ ಇರೋ ಸುಸಜ್ಜಿತ ರಸ್ತೆಯನ್ನ ಕೇವಲ 35 ದಿನಗಳಲ್ಲಿ ನಿರ್ಮಿಸಿ ಉಡುಗೊರೆಯಾಗಿಯೇ ಕೊಟ್ಟಿದ್ದಾರೆ.
ಅಂದ್ಹಾಗೆ ಈ ಗಿಫ್ಟ್ ಅನ್ನ ಸಂಸದರು ಈ ವಧುವೆಗೆ ಕೊಡಲು ಬಲವಾದ ಕಾರಣವೂ ಇದೆ. ವಧು ಪ್ರಿಯಾಂಕಾ ಶರ್ಮಾ, ಸತೀಶ್ ಗೌತಮ್ ಅವರ ಪರಿಚಯದ ನವೀನ್ ಅವರ ಮಗಳು. ಮದುವೆಗೆ ಹೋಗಲು ಆಗಲೇ ಅನ್ನೋ ಕಾರಣಕ್ಕೆ ಈ ಏರಿಯಾಕೆ ಬಂದಿದ್ದರು. ಆಗ ಇಲ್ಲಿಯ ರಸ್ತೆ ಹದೆಗಟ್ಟದನ್ನ ಕಂಡಿದ್ದರು.
ವಧು ಪ್ರಿಯಾಂಕಾ ಕೂಡ ರಸ್ತೆ ಸರಿ ಮಾಡಿಕೊಡಿ, ಗಿಫ್ಟ್ ಅಂತ ಕೊಡೋದಾದ್ರೆ, ರಸ್ತೆ ಸರಿ ಮಾಡಿಸಿಕೊಡಿ ಅಂತಲೇ ಕೇಳಿದ್ದಳು. ಅದಕ್ಕೇನೆ ಈ ಸಂಸದರು ಈ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ.
PublicNext
21/06/2022 04:55 pm