ಮೈಸೂರು : ರಾಜ್ಯದ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಇಂದು ಮೈಸೂರಿನ ಅರಮನೆಯ ಆವರಣದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗಾಭ್ಯಾಸ ಮಾಡಿದ ಬಳಿಕ ಮೈಸೂರು ರಾಜಮನೆತನದ ಜೊತೆ ಅರಮನೆಯಲ್ಲಿ ಉಪಹಾರ ಸೇವಿಸಿದರು.
ಇನ್ನು ಅರಮನೆಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೂ ಗುಚ್ಛ ನೀಡಿ ಸ್ವಾಗತಿಸಿದರು.
ಇನ್ನು ರಾಜಮನೆತನದಿಂದ ಪ್ರಧಾನಿ ಮೋದಿಯವರಿಗೆ ವಿಶೇಷ ಗಿಫ್ಟ್ ಕೂಡ ನೀಡಿಲಾಗಿದೆ. ಇದೇ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುತ್ರನಿಗೆ ಹಾರ ಹಾಕಿದ ಪ್ರಧಾನಿಗಳು ಪಕ್ಕದಲ್ಲೇ ಕೂರಿಸಿಕೊಂಡ ಮುದ್ದಾಡಿದ್ದಾರೆ.
ಇನ್ನು ಪ್ರಧಾನಿ ಮೋದಿಗಾಗಿ ಬಗೆ ಬಗೆಯ ಸಿಹಿ ತಿಂಡಿ ತಿನಿಸುಗಳನ್ನು ಸಿದ್ದಪಡಿಸಲಾಗಿತ್ತು. ಇನ್ನು ರಾಜವಂಶಸ್ಥೆ ಪ್ರಮೋದಾ ದೇವಿ ಆಹ್ವಾನದ ಮೇರೆಗೆ ಪ್ರಧಾನಿ ಅರಮನೆಯಲ್ಲಿ ಉಪಹಾರ ಸೇವಿಸಿದ್ದಾರೆ. ರಾಜಾತಿಥ್ಯವನ್ನು ಪ್ರತಿನಿಧಿಸುವಂತೆ ಬೆಳ್ಳಿ ತಟ್ಟೆಯಲ್ಲಿ ಉಪಹಾರ ಬಡಿಸಲಾಗಿತ್ತು. ಈ ವೇಳೆ ಸಿಎಂ ಬೊಮ್ಮಾಯಿ, ರಾಜ್ಯಪಾಲರು ಉಪಸ್ಥಿತರಿದ್ದರು. ಉಪಹಾರದ ಬಳಿಕ ಪ್ರಧಾನಿ ಜೊತೆ ರಾಜ ಮನೆತನದವರು ವಿಶ್ರಮಿಸಿರುವ ಫೋಟೋಗಳು ವೈರಲ್ ಆಗಿವೆ.
PublicNext
21/06/2022 02:51 pm