ಬೆಂಗಳೂರು: ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜಕೀಯ ಜಂಜಾಟ ಬದಿಗಿಟ್ಟು, ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ದುಬೈ ಪ್ರವಾಸ ಮುಗಿಸಿ ಬಂದಿದ್ದ ಬಿಎಸ್ವೈ ಇದೀಗ ಮತ್ತೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾರೆ.
ಕುಟುಂಬ ಸಮೇತ ಲಂಡನ್ಗೆ ತೆರಳಿರುವ ಯಡಿಯೂರಪ್ಪ 5 ದಿನಗಳ ಕಾಲ ಲಂಡನ್ ಪ್ರವಾಸ ಮುಗಿಸಿ ವಾಪಸ್ ಆಗಲಿದ್ದಾರೆ. ಅವರೊಂದಿಗೆ ಪುತ್ರರಾದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಕುಟುಂಬಸ್ಥರೆಲ್ಲ ಇದ್ದಾರೆ.
PublicNext
21/06/2022 01:47 pm