ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಜಾರಿಗೆ ಸಂಬಂಧಿಸಿದಂತೆ ಹೋರಾಟ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲಿಯೇ ಈಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಭಾರತೀಯ ಸೇನಾ ನಡೆತೆಯನ್ನೆ ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ದೇಶದ ರಾಜಕೀಯ ಪಕ್ಷವೊಂದು ಸೇನೆಯನ್ನ ಅಪಮಾನ ಮಾಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಎಲ್ಲ ಗಡಿಯನ್ನ ಮೀರಿ ಮಾತನಾಡುತ್ತಿದೆ ಎಂದು ಶೆಹಜಾದ್ ಸಿಟ್ಟಾಗಿದ್ದಾರೆ.
ಅಗ್ನಿಪಥ ಯೋಜನೆ ಜಾರಿಯಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿದೆ ಎಂದು ಶೆಹಜಾದ್, ಅಗ್ನಿಪಥ ಮೂಲಕ ಆರ್‌ಎಸ್.ಎಸ್.ನವರನ್ನ ಸೇನೆಗೆ ಸೇರಿಸಿಕೊಳ್ತಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ದೂರಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವ್ರು ಅಗ್ನಿವೀರರನ್ನ ನಾಜಿಗೆ ಹೋಲಿಸುತ್ತಿದ್ದಾರೆ. ಕಾಂಗ್ರೆಸ್ ನ ಇರ್ಫಾನ್ ಅನ್ಸಾರಿ ಈ ಅಗ್ನಿವೀರರು ನಾಲ್ಕು ವರ್ಷದ ಬಳಿಕ ಸೂಪಾರಿ ಕಿಲ್ಲರ್ ಆಗ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇಂತಹ ಕಾಮೆಂಟ್‌ಗಳ ಮೂಲಕ ಭಾರತೀಯ ಸೇನೆಯ ಇವರೆಲ್ಲ ಅಪಮಾನ ಮಾಡ್ತಿದ್ದಾರೆಂದು ಶೆಹಜಾದ್ ಕೆಂಡಾಮಂಡಲ ಆಗಿದ್ದಾರೆ.
PublicNext
20/06/2022 09:04 pm