ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಕೊರೊನಾ ಹಬ್ಬಲ್ವಾ? ಅವರನ್ನು ಕಂಡು ಕೊರೊನಾ ಓಡಿ ಹೋಗುತ್ತಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, 'ಕಾಂಗ್ರೆಸ್‌ನವರು ಸಭೆ-ಸಮಾರಂಭ ಮಾಡಿದರೆ ಕೊರೊನಾ ಬರುತ್ತದೆ ಎಂದು ಬಿಜೆಪಿ ಸರ್ಕಾರ ಹೇಳುತ್ತದೆ. ಈಗ ಅವರೇ ಸಭೆ, ಸಮಾರಂಭ ಮಾಡುತ್ತಿದ್ದಾರೆ. ಶನಿವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ಸಾರ್ವಜನಿಕ ಸಭೆ ಮಾಡಿದರು. ಅಲ್ಲೂ ಸಾಕಷ್ಟು ಜನ ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಜ್ಯಕ್ಕೆ ಬರುತ್ತಾರೆ. ಬೆಂಗಳೂರಿನಲ್ಲಿ ಸಭೆ ಮಾಡುತ್ತಾರೆ, ಮೈಸೂರಿನಲ್ಲೂ ಯೋಗ ಮಾಡಲಿದ್ದಾರೆ. ಆ ಯೋಗ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನ ಸೇರುತ್ತಾರೆ. ನಂತರ ಸಾರ್ವಜನಿಕ ಸಭೆ ಮಾಡಲಿದ್ದಾರೆ. ಅಲ್ಲಿ ಕೊರೊನಾ ಹಬ್ಬಲ್ವಾ? ಮೋದಿ ಅವರನ್ನು ಕಂಡು ಸೂಕ್ಷ್ಮಾಣುಜೀವಿಗಳು ಓಡಿ ಹೋಗುತ್ತಾ? ಎಂದು ಲೇವಡಿ ಮಾಡಿದರು.
PublicNext
20/06/2022 08:24 am