ನವದೆಹಲಿ: ಕೇಂದ್ರದ ಅಗ್ನಿಪಥ ಯೋಜನೆ ವಿರೋಧಿಸಿ ಭಾನುವಾರ ನಾಳೆ ಕಾಂಗ್ರೆಸ್ ಪಕ್ಷ ಸತ್ಯಾಗ್ರಹ ಮಾಡಲು ಮುಂದಾಗಿದೆ.
ಈ ಒಂದು ಸತ್ಯಾಗ್ರಹದಲ್ಲಿ ಪಕ್ಷದ ಸಂಸದರು, ಸಿಡಬ್ಲ್ಯೂಸಿ ಸದಸ್ಯರು, ಎಐಸಿಸಿ ಕಚೇರಿ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮುಂದಿನ ಹೋರಾಟದ ಬಗ್ಗೆ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಕಳೆದ 8 ವರ್ಷಗಳಿಂದ "ಜೈ ಜವಾನ್ ಜೈ ಕಿಸಾನ್" ತತ್ವಕ್ಕೆ ಕೇಂದ್ರ ಸರ್ಕಾರ ಅವಮಾನ ಮಾಡ್ತಾನೇ ಇದೆ ಬಂದಿದೆ.
ಕೇಂದ್ರದ ಅಗ್ನಿಪಥ ಯೋಜನೆಗೆ ಯುವಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಯೋಜನೆಯನ್ನ ಸರ್ಕಾರ ಹಿಂಪಡೆಯಲೇಬೇಕು ಎಂದು ರಾಹುಲ್ ಟ್ವಿಟ್ ಮೂಲಕ ಒತ್ತಾಯಿಸಿದ್ದಾರೆ.
PublicNext
18/06/2022 11:11 am