ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಚಾರಣೆ ಮುಂದೂಡಿ ಸ್ವಲ್ಪ ಗ್ಯಾಪ್ ಕೊಡಿ: ರಾಹುಲ್ ಗಾಂಧಿ ಮನವಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಮತ್ತೆ ವಿಚಾರಣೆಗೆ ಕರೆದಿದೆ. ಆದ್ರೆ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡುವಂತೆ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ ಎನ್ನಲಾಗ್ತಿದ್ದು, ಈ ಬೇಡಿಕೆಗೆ ಇ.ಡಿ ಇದುವರೆಗೂ ಯಾವುದೇ ಉತ್ತರ ನೀಡಿಲ್ಲ.

ಅಂದ್ಹಾಗೆ, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಹುಲ್ ಗಾಂಧಿ ಅವರನ್ನು ಮೂರು ದಿನಗಳಿಂದ ಇಡಿ ಪ್ರಶ್ನಿಸ್ತಿದೆ. ಬುಧವಾರವೂ 10 ಗಂಟೆಗೂ ಹೆಚ್ಚು ಕಾಲ ರಾಹುಲ್‌ ವಿಚಾರಣೆ ನಡೆಸಿದ ಇಡಿ, ಶುಕ್ರವಾರ ಮತ್ತೆ ಇಡಿ ಕಚೇರಿಗೆ ಬರಬೇಕು ತಿಳಿಸಿದೆ. ಮಧ್ಯ ಒಂದು ದಿನದ ವಿಶ್ರಾಂತಿ ನೀಡಲಾಗಿದೆ. ಆದ್ರೆ ಕಾಂಗ್ರೆಸ್ ನಾಯಕ, ಶುಕ್ರವಾರದ ಬದಲು ಸೋಮವಾರ ವಿಚಾರಣೆಗೆ ಬರಲು ಬಯಸಿದ್ದು, ವಿಚಾರಣೆ ಮುಂದೂಡುವಂತೆ ಮನವಿ ಮಾಡಿದ್ದಾರೆ. ಆದ್ರೆ, ರಾಹುಲ್‌ ಗಾಂಧಿ ಮನವಿಯನ್ನ ಇಡಿ ಸ್ವೀಕರಿಸಲಾಗಿದೆಯೇ? ಅಥವಾ ತಿರಸ್ಕರಿಸಲಾಗಿದೆಯೇ?ಎಂಬುದು ಸ್ವಲ್ಪ ಸಮಯದ ನಂತ್ರ ಸ್ಪಷ್ಟವಾಗುತ್ತದೆ. ಅಂದಹಾಗೆ, ರಾಹುಲ್ ಗಾಂಧಿ ವಿಚಾರಣೆಯನ್ನು ಏಕೆ ಮುಂದೂಡಲು ಬಯಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಇಡಿಗೆ ತಮ್ಮ ಕಡೆಯಿಂದ ಯಾವುದೇ ಕಾರಣ ನೀಡಿಲ್ಲ.

Edited By : Nagaraj Tulugeri
PublicNext

PublicNext

16/06/2022 05:38 pm

Cinque Terre

82.9 K

Cinque Terre

13

ಸಂಬಂಧಿತ ಸುದ್ದಿ