ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂನ್-18ಕ್ಕೆ ಮೋದಿ ಅಮ್ಮನಿಗೆ 100 ವರ್ಷ-ಗುಜರಾತ್ ರಸ್ತೆಯೊಂದಕ್ಕೆ ತಾಯಿ ನಾಮಕರಣ

ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಜೂನ್-18 ರಂದು 100 ವರ್ಷ ಪೂರೈಸುತ್ತಿದ್ದಾರೆ. ಇವರ ಜನ್ಮದಂದು ಮೋದಿ ತಾಯಿಯನ್ನ ಭೇಟಿಯಾಗಲು ಇಲ್ಲಿಯ ವಡ್‌ನಗರಕ್ಕೂ ಮೋದಿ ಆಗಮಿಸುತ್ತಿದ್ದಾರೆ.

ಮೋದಿ ಅವರ ತವರೂರಾದ ವಡ್‌ನಗರದಲ್ಲಿ ಹೀರಾಬೆನ್ ಮೋದಿ ದೀರ್ಘಾಯುಷ್ಯಕ್ಕಾಗಿಯೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂ ನಡೆಯುತ್ತಿವೆ.

ಇಲ್ಲಿಯ ರೈಸನ್ ಪ್ರದೇಶದಲ್ಲಿರೋ 80 ಮೀಟರ್ ರಸ್ತೆಗೆ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ಹೆಸರನ್ನೂ ಇಡಲಾಗುತ್ತಿದೆ.

ತಾಯಿಯ ಜನ್ಮಕ್ಕಾಗಿಯೇ ಇಲ್ಲಿಗೆ ಆಗಮಿಸ್ತಿರೋ ಪ್ರಧಾನಿ ಮೋದಿ,ಪಾವಗಢ್ ದೇವಾಲಯಕ್ಕೂ ಭೇಟಿಕೊಡಲಿದ್ದಾರೆ. ವಡೋದರಾದಲ್ಲಿ ನಡೆಯೋ ರ‍್ಯಾಲಿಯನ್ನು ಉದ್ದೇಶಿಸಿ ಕೂಡ ಮಾತನಾಡಲಿದ್ದಾರೆ.

Edited By :
PublicNext

PublicNext

16/06/2022 11:49 am

Cinque Terre

35.77 K

Cinque Terre

9

ಸಂಬಂಧಿತ ಸುದ್ದಿ