ಚಾಮರಾಜನಗರ: ನನ್ನ ಜಮೀನಿಗೆ ಕೊಳವೆ ಬಾವಿ ತೋಡಿಸಿಕೊಡಿ, ಇಲ್ಲ ನನಗೆ ಸರ್ಕಾರಿ ನೌಕರಿ ಕೊಡಿ ಎಂಬ ವಿಶೇಷ ಮನವಿ ಪತ್ರವು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಪೆಟ್ಟಿಗೆಯಲ್ಲಿ ಸಿಕ್ಕಿದೆ.
ಹೌದು. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ರಾಜೇಂದ್ರ ಎಂಬ ಮತದಾರ ಕೊಳವೆ ಬಾವಿ ತೋಡಿಸಿಕೊಡಿ ಅಂತ ಪತ್ರ ಬರೆದು ಮತ ಪೆಟ್ಟಿಗೆಗೆ ಪತ್ರ ಹಾಕಿದ್ದಾನೆ. 'ನಾನು ಎಂ.ಎ, ಬಿ.ಎಡ್ ಮಾಡಿದ್ದೇನೆ. ಆದ್ರೆ ನನಗೆ ಕೆಲಸ ಇಲ್ಲ. ನಮ್ಮಪ್ಪನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜಮೀನಿಗೆ ಕೊಳವೆ ಬಾವಿ ಅವಶ್ಯಕತೆ ಇದೆ. ನನಗೆ ಸರ್ಕಾರಿ ಕೆಲಸ ಕೊಡಿ ಇಲ್ಲ ಅಂದ್ರೆ ಜಮೀನಿನಲ್ಲಿ ಕೊಳವೆಬಾವಿ ತೋಡಿಸಿಕೊಡಿ' ಎಂದು ಯುವಕ ಪತ್ರದ ಮೂಲಕ ಮನವಿ ಮಾಡಿದ್ದಾನೆ. ಜೊತೆಗೆ ಪೆಟ್ರೋಲ್ ಹಾಗೂ ರಸಗೊಬ್ಬರ ಬೆಲೆಯನ್ನು ಇಳಿಸುವಂತೆಯೂ ಯುವಕ ಮನವಿ ಮಾಡಿಕೊಂಡಿದ್ದಾನೆ.
PublicNext
16/06/2022 10:17 am