ನವದೆಹಲಿ: ನಾನು ದಲಿತ ನಾಯಕ ಅಲ್ಲ. ಕಾಂಗ್ರೆಸ್ ನಾಯಕ. ಬಿಜೆಪಿ ಮುಖಂಡರ ಟೀಕೆಗಳಿಗೆ ರಾಜ್ಯಸಭೆ ವಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಈಗ ಹೀಗೆ ತಿರುಗೇಟು ನೀಡಿದ್ದಾರೆ.
ನಾನು ದಲಿತ ಅಂತ ಸಚಿವನಾಗಿದ್ದಾ ? ದಲಿತ ಅಂತಲೇ ವಿಪಕ್ಷದ ನಾಯಕನಾಗಿದ್ದಾ ? ಇಲ್ಲ ಬಿಡಿ. ನಾನು ಕಾಂಗ್ರೆಸ್ ಕಾರ್ಯಕರ್ತ ಅನ್ನೊ ಕಾರಣಕ್ಕೇನೆ ಇಷ್ಟೆಲ್ಲ ಆಗಿದ್ದು ಅಂತಲೇ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಬಿಜೆಪಿಯವರು ಹುಚ್ಚರಿದ್ದಾರೆ. ಬಿಜೆಪಿಯದ್ದು ಇಬ್ಬಾಗ ಮಾಡೋ ನೀತಿ. ನಾನೇನು ದಲಿತನಾಗಿ ಸಚಿವನಾಗಿದ್ದಾ ? ಇಂತಹ ಮಾತುಗಳನ್ನ ಅವರು ಮುಂದೆಂದೂ ಆಡಬಾರದು. ಸಣ್ಣ ಪುಟ್ಟ ವಿಷಯವನ್ನ ಇಟ್ಟುಕೊಂಡು ಜಾತಿ ಹೆಸರು ಹೇಳೋದು ಬಿಜೆಪಿ ಮತ್ತು RSS ಮನಸ್ಥಿತಿ ಆಗಿದೆ. ಇಂತಹ ಮನುವಾದಿಗಳ ಮಾತಿಗೆ ನಾನು ಸೊಪ್ಪಿ ಹಾಕೋದಿಲ್ಲ ಅಂತಲೇ ಖರ್ಗೆ ಹೇಳಿ ಬಿಟ್ಟಿದ್ದಾರೆ.
PublicNext
16/06/2022 08:18 am