ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದೂ ರಾಹುಲ್ ಇಡಿ ವಿಚಾರಣೆ-ಕಾಂಗ್ರೆಸ್‌ನಿಂದ ಇವತ್ತು ರಾಜಭವನ ಚಲೋ !

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನ ಕಳೆದ ಮೂರು ದಿನದಿಂದಲೂ ಜಾರಿ ನಿರ್ದೇಶನಾಲಯವು ವಿಚಾರಣೆ ಮಾಡ್ತಾನೇ ಇದೆ. ಸತತ 30 ಗಂಟೆ ವಿಚಾರಣೆ ನಡೆಸಿರೋ ಇಡಿ ಇಂದೂ ಕೂಡ ವಿಚಾರಣೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ಮತ್ತೊಂದು ಸುತ್ತಿನ ಹೋರಾಟಕ್ಕೂ ಸಜ್ಜಾಗಿದೆ.

ನ್ಯಾಷನಲ್ ಹೆರಾಲ್ಡ್ ಅಕ್ರಮ ವರ್ಗಾವಣೆ ಸಂಬಂಧಿಸಿದ ಈ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಲೇ ಇದ್ದಾರೆ. ಆದರೆ ಇತ್ತ ಕಾಂಗ್ರೆಸ್ ಪಕ್ಷದ ಹೋರಾಟ ಬಲು ಜೋರಾಗಿಯೇ ಇದ್ದು, ಇವತ್ತು ಕೂಡ ರಾಷ್ಟ್ರವ್ಯಾಪಿ ಇನ್ನೊಂದು ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ರೆಡಿ ಆಗಿದೆ.

ಬೆಂಗಳೂರಿನ ರಾಜಭವನಕ್ಕೆ ಮುತ್ತಿಗೆ ಹಾಕೋವಂತೆ ದೆಹಲಿಯ ಎಐಸಿಸಿ ಕಚೇರಿಯಿಂದ ಸಂದೇಶ ಬಂದಿದೆ. ಈ ಕಾರಣಕ್ಕೇನೆ ಬೆಳಗ್ಗೆ 9 ಗಂಟೆ ಹೊತ್ತಿಗೆ ಕಾಂಗ್ರೆಸ್ ನಾಯಕರು ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ.

Edited By :
PublicNext

PublicNext

16/06/2022 07:58 am

Cinque Terre

35.28 K

Cinque Terre

1

ಸಂಬಂಧಿತ ಸುದ್ದಿ