ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾವೇನು ಲಂಚಕ್ಕೆ ಹೋಗಿದ್ದಿವಾ, ಇಲ್ಲ ಮಂಚಕ್ಕೆ ಹೋಗಿದ್ದೀವಾ: ಡಿಕೆ ಶಿವಕುಮಾರ್

ಬೆಂಗಳೂರು: ನಾವೇನು ಕಳ್ಳತನ ಮಾಡಿದಿವಾ, ಇಲ್ಲ ಲಂಚಕ್ಕೆ ಹೋಗಿದ್ವಾ, ಇಲ್ಲ ಮಂಚಕ್ಕೆ ಹೋಗಿದ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೊಂಚ ಖಾರವಾಗಿಯೇ ಹೇಳಿಕೆ ಕೊಟ್ಟಿದ್ದಾರೆ.

ನಾಯಕ ರಾಹುಲ್ ಗಾಂಧಿ ಅವರ ಮೇಲಿನ ಇಡಿ ವಿಚಾರಣೆ ಖಂಡಿಸಿ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಮಾತನಾಡಿದ್ದು,

ಅವರ 40% ಮಂತ್ರಿಗಳು ರಾಜೀನಾಮೆ ಕೊಡ್ಲಿಲ್ವಾ, ಕೆಂಪಣ್ಣ ಅವರು ರಾಜೀನಾಮೆ ಕೊಟ್ಟಿಲ್ವಾ ಎಂದು ಹಳೆಯದನ್ನ ಕೆದುಕಿ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದರು ಡಿಕೆಶಿ.

ಕಾನ್ಸ್ಟೆಬಲ್, ಪಿಎಸ್ಐ ಹುದ್ದೆ ಹಗರಣ ನಡೆದಿದೆ. ಅದರ ಮಧ್ಯ ಇದೇನಿದು ಹತ್ತು ಲಕ್ಷ ಜಾಬ್.ಎರಡು ಕೋಟಿ ಕೊಡುವೆ ಎಂದಿದ್ದ ಕೇಂದ್ರ ಸರ್ಕಾರ ಈಗೇನ್ ಹೇಳ್ತಿದೆ ಅಂತಾ ಡಿಕೆಸಿ ಪ್ರಶ್ನಿಸಿದ್ರು. ಬಿಜೆಪಿ ಪಕ್ಷ ಜನಸಾಮಾನ್ಯರನ್ನ ತಪ್ಪು ದಾರಿಗೆ ಎಳಿಯುವ ಪ್ರಯತ್ನ ಮಾಡ್ತಿದೆ. ಬಿಜೆಪಿ ಅವ್ರು ನಮ್ಮ ನಾಯಕರನ್ನ ರಾಜಕೀಯವಾಗಿ ಮುಗಿಸುವ ಹುನ್ನಾರದಲ್ಲಿದೆ. ಯಾರು ಏನ್ ಬೇಕಾದರೂ ಮಾಡಿಕೊಳ್ಳಲಿ. ನಮ್ಮ ನಾಯಕರನ್ನ ಏನೂ ಮಾಡೊದಕ್ಕೆ ಆಗಲ್ಲ ಎಂದು ಡಿಕೆ ಗುಡುಗಿದರು.

Edited By : Manjunath H D
PublicNext

PublicNext

15/06/2022 02:53 pm

Cinque Terre

74.25 K

Cinque Terre

14

ಸಂಬಂಧಿತ ಸುದ್ದಿ