ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BJP ಗೆ ಜಿಂದಾಬಾದ್ ಎಂದ ಡಿ.ಕೆ.ಸುರೇಶ್ ತಕ್ಷಣವೇ ಬಿಜೆಪಿಗೆ ಮುರ್ದಾಬಾದ್ ಎಂದಿದ್ದಾರೆ : ವಿಡಿಯೋ ವೈರಲ್

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ.ಸೋನಿಯಾ ಗಾಂಧಿ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳುವ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದರೆ, ರಾಹುಲ್ ಗಾಂಧಿಯವರನ್ನು ಇಡಿ ನಿನ್ನೆ ಸುಮಾರು 10 ಗಂಟೆ ವಿಚಾರಣೆ ನಡೆಸಿ ಇಂದು ವಿಚಾರಣೆ ಮುಂದುವರೆಸಿದೆ.

ಇನ್ನು ಇಂದು ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ದಿನೇಶ್ ಗುಂಡೂರಾವ್, ಡಿಕೆ ಸುರೇಶ್ ಭಾಗಿಯಾಗಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಭಾರಿ ತಳ್ಳಾಟ ನಡೆದಿದೆ. ಡಿ.ಕೆ.ಸುರೇಶ್ ಅವರು ತಳ್ಳಾಟ ನಡೆಸಿದ ವೇಳೆ, ಪೊಲೀಸರ ಜತೆ ವಾಗ್ವಾದ ನಡೆದಿದೆ. ಈ ವೇಳೆ ನಿಮ್ಮ ಹಿರಿಯ ಅಧಿಕಾರಿಯನ್ನು ಸ್ಥಳಕ್ಕೆ ಬರಲು ಹೇಳಿ, ನಮ್ಮನ್ನು ಅರೆಸ್ಟ್ ಮಾಡುವುದಕ್ಕೆ ನೀವ್ಯಾರು ಎಂದು ಡಿ.ಕೆ.ಸುರೇಶ್ ಪ್ರಶ್ನಿಸಿದಾಗ, ತಾವು ಯಾರು ಎನ್ನುವುದನ್ನು ಪೊಲೀಸರು ಕೃತ್ಯದ ಮೂಲಕ ತೋರಿಸಿದರು.

ವ್ಯಾನ್ ನೊಳಕ್ಕೆ ಅವರನ್ನು ತಳ್ಳುತ್ತಿದ್ದಂತೆಯೇ ಸುರೇಶ್ ಬಿಜೆಪಿಗೆ ಜಿಂದಾಬಾದ್ ಎಂದರು. ತಕ್ಷಣ ತಾವು ಹೇಳಿದ್ದು ತಪ್ಪಾಯಿತು ಎಂದು ಗೊತ್ತಾಗಿ, ಬಿಜೆಪಿಗೆ ಮುರ್ದಾಬಾದ್ ಎಂದರು! ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Edited By : Nirmala Aralikatti
PublicNext

PublicNext

14/06/2022 08:25 pm

Cinque Terre

181.74 K

Cinque Terre

10

ಸಂಬಂಧಿತ ಸುದ್ದಿ