ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಸರಣಿ ಟ್ವೀಟ್ ಗಳ ಮೂಲಕ ಇ.ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಫ್ ಐಆರ್ ದಾಖಲಾದೆ ಸಮನ್ಸ್ ನೀಡಲು, ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಅಧಿಕಾರವೇ ಇಲ್ಲ. ರಾಹುಲ್ ಗಾಂಧಿ ಅವರನ್ನು ಯಾವ ಸೆಕ್ಷನ್ ಮೇಲೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
'ನಿಗದಿತ ಅಪರಾಧ' ಯಾವುದು? ನಿಗದಿತ ಅಪರಾಧಕ್ಕೆ ಸಂಬಂಧಿಸಿದಂತೆ ಯಾವ ಪೊಲೀಸ್ ಸಂಸ್ಥೆ FIR ದಾಖಲಿಸಿದೆ? FIR ಎಲ್ಲಿದೆ? ದಯವಿಟ್ಟು ನಮಗೆ ಎಫ್ ಐಆರ್ ನ ಪ್ರತಿಯನ್ನು ತೋರಿಸುತ್ತೀರಾ?" ಎಂದು ಟ್ವೀಟ್ ಮಾಡಿದ್ದಾರೆ.PMLA ಕಾನೂನಿನ ಯಾವ ಸೆಕ್ಷನ್ ಅಡಿ,ರಾಹುಲ್ ರನ್ನು ವಿಚಾರಣೆ ಮಾಡುತ್ತಿದ್ದೀರಾ? ಇದಕ್ಕೆ ಬಿಜೆಪಿಗರು ಉತ್ತರಿಸುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
PublicNext
14/06/2022 07:22 pm