ಬೆಂಗಳೂರು: 'ಬಿದಿರು ನೀನ್ಯಾರಿಗಲ್ಲದವಳು' ಹೆಸರಿನ ಆತ್ಮಕಥೆ ಇಂದು ಲೋಕಾರ್ಪಣೆಗೊಂಡಿದೆ. ಮಾಜಿ ಸಚಿವೆ ಮೋಟಮ್ಮ ಅವರು ಬರೆದಿರುವ ಈ ಆತ್ಮಕಥೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದುಗೆ ಪಕ್ಷದ ಉನ್ನತಿ ಗಮನದಲ್ಲಿಲ್ಲ,ಅವರು ವೈಯಕ್ತಿಕ ಲಾಭಕ್ಕೆ ಹೆಚ್ಚು ಗಮನ ಕೊಡುತ್ತಾರೆ. ತಾವೇ ಲೀಡರ್ ಆಗಬೇಕು ಎನ್ನುವುದು ಅವರ ಉದ್ದೇಶ. ನನಗಿದ್ದ ಎಲ್ಲಾ ಅವಕಾಶಗಳ ಬಾಗಿಲನ್ನು ಶಾಶ್ವತವಾಗಿ ಮುಚ್ಚಿಬಿಟ್ಟರು ಎಂದು ಸಿದ್ದು ವಿರುದ್ಧ ಬೇಸರ ಹೊರಹಾಕಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆತ್ಮಕಥೆ ಲೋಕಾರ್ಪಣೆಗೊಳಿಸಿದರು.ಆತ್ಮಕಥೆಯ 'ಬಿಸಿಲುಗುದುರೆ ಬೆನ್ನೇರಿ' ಎಂಬ ಭಾಗದಲ್ಲಿ ಸಿದ್ದರಾಮಯ್ಯ ವಿರುದ್ಧ ಮೋಟಮ್ಮ ಅಸಮಾಧಾನ ಹೊರಹಾಕಿದ್ದಾರೆ. ನನ್ನನ್ನು ಮಂತ್ರಿ ಮಾಡಬಹುದಿತ್ತು. ಆದರೂ ಮಾಡಲಿಲ್ಲ. ಸಭಾಧ್ಯಕ್ಷೆ ಆಗುವ ಅವಕಾಶವೂ ಇತ್ತು. ಅದನ್ನು ಮಾಡಲಿಲ್ಲ. ಈ ಬಗ್ಗೆ ನನಗೆ ಇನ್ನೂ ಬೇಸರ ಇದೆ ಎಂದಿದ್ದಾರೆ.
PublicNext
12/06/2022 01:15 pm