ಭೋಪಾಲ್ : ಪ್ರವಾದಿ ಮೊಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮ ಹಾಗೂ ಬಿಜೆಪಿ ನಾಯಕ ನವೀನ್ ಜಿಂದಾಲ್ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ.ಇದಕ್ಕೆ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಪ್ರತಿಕ್ರಿಯಿಸಿ ಬಿಜೆಪಿಯಿಂದ ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರಿಗೆ ಬೆಂಬಲ ನೀಡಿದ್ದಾರೆ.
“ನಮ್ಮ ದೇವತೆಗಳನ್ನು ನಿಂದಿಸಿದರೆ ಮಾತ್ರ ಸತ್ಯವೇ?’ ಎಂದು ವಿರೋಧಿಗಳನ್ನು ಪ್ರಶ್ನಿಸಿದ್ದಾರೆ.“ಜ್ಞಾನವಾಪಿಯಲ್ಲಿ ದೇವಸ್ಥಾನವಿತ್ತು, ಈಗಲೂ ಇದೆ. ಅವರು ನಮ್ಮನ್ನು ಅಷ್ಟು ನಿಂದಿಸುವಾಗ ನಾವು ಸತ್ಯವನ್ನೂ ಹೇಳುವಂತಿಲ್ಲವೇ? ನೀವು ನಮ್ಮ ದೇವತೆಗಳ ಬಗ್ಗೆ ಸತ್ಯ ಹೇಳಿದಾಗ ಅದನ್ನು ನಾವು ಒಪ್ಪಿಕೊಂಡಿದ್ದೇವೆ.
ಆದರೆ ಈಗ ನಾವು ಸತ್ಯ ಹೇಳುವಾಗ ನಿಮಗೇಕೆ ನೋವಾಗುತ್ತಿದೆ. ಇದು ಇತಿಹಾಸ ಹಾಳಾಗಿದೆ ಎನ್ನುವುದನ್ನು ತೋರಿಸುತ್ತದೆ’ ಎಂದಿದ್ದಾರೆ.
PublicNext
12/06/2022 11:22 am