ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಯಾರಿಗೆ ಯೋಗ ಇರುತ್ತೋ ಅವ್ರು ಸಿಎಂ ಆಗ್ತಾರೆ:ಬಿ. ಸಿ. ಪಾಟೀಲ್

ದಾವಣಗೆರೆ: ಯಾರಿಗೆ ಯೋಗ ಇದೆಯೋ ಅವರು ಸಿಎಂ ಆಗ್ತಾರೆ. ಅದಕ್ಕೆ ಯೋಗ ಇರಬೇಕು, ಯೋಗ್ಯತೆಯೂ ಇರಬೇಕು ಎಂದು ಕೃಷಿ ಸಚಿವ ಬಿ.‌ಸಿ. ಪಾಟೀಲ್ ಹೇಳಿದ್ದಾರೆ.

ಮಾಜಿ ಸಿಎಂ ಬಿ.‌ಎಸ್. ಯಡಿಯೂರಪ್ಪರ ಪುತ್ರ ಬಿ. ವೈ. ವಿಜಯೇಂದ್ರ ಮುಂದೆ ಸಿಎಂ ಆಗುವ ಚರ್ಚೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ಶಾಲೆ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಸಿಎಂ ಆಗಲು ಜನರ ಹಾಗೂ ಹೈಕಮಾಂಡ್ ಆಶೀರ್ವಾದ ಇರ್ಬೇಕು. ನಾಳೆ ರವಿಅಣ್ಣ ಅಂದರೆ ಶಾಸಕ ಎಸ್. ಎ.‌ರವೀಂದ್ರನಾಥ್ ಅವರೂ ಸಹ ಸಿಎಂ ಆಗಬಹುದು ಎಂದು ತಮಾಷೆ ಮಾಡಿದರು.

Edited By : Nagesh Gaonkar
PublicNext

PublicNext

11/06/2022 03:51 pm

Cinque Terre

54.93 K

Cinque Terre

1

ಸಂಬಂಧಿತ ಸುದ್ದಿ