ಬೆಳಗಾವಿ: ಇಸ್ಲಾಂ ಧರ್ಮ ಗುರು ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಯನ್ನ ಖಂಡಿಸಿ ಬೆಳಗಾವಿಯಲ್ಲಿ ವಿಚಿತ್ರ ಪ್ರತಿಭಟನೆ ನಡೆದಿದೆ.ನೂಪುರ್ ಶರ್ಮಾ ಫೋಟೋ ಅಂಟಿಸಿರೋ ಪ್ರತಿಕೃತಿಯನ್ನ ನೇಣುಹಾಕಿ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದ ಫೋರ್ಟ್ ರಸ್ತೆಯಲ್ಲಿ ಹಗ್ಗ ಕಟ್ಟಿ ಗುರುವಾರವೇ ತಡ ರಾತ್ರಿ ನೇತುಹಾಕಿದ್ದರು. ಆದರೆ, ಶುಕ್ರವಾರ
ಬೆಳಗ್ಗೆ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು.
ಈ ಒಂದು ದೃಶ್ಯವನ್ನ ಕಂಡ ಹಿಂದೂ ಸಂಘಟನೆಗಳಾದ ಹಿಂದೂ ಜಾಗರಣ,ಶ್ರೀರಾಮ್ ಸೇನೆ ಹಾಗೂ ಪಾಲಿಕೆಯ ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
10/06/2022 08:09 pm