ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬದಲಾವಣೆಗೆ ಇದು ಸಕಾಲ.. ಜೊತೆಗಿರುವೆ ಸದಾಕಾಲ: ಗುರಿಕಾರ

ಹಾವೇರಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸವರಾಜ ಗುರಿಕಾರ ಅವರು ಎಡೆಬಿಡದ ಪ್ರಚಾರ ನಡೆಸಿದ್ದಾರೆ.

ನಾಳೆ ಸಂಜೆ 5ಕ್ಕೆ ಪ್ರಚಾರ ಕಾರ್ಯಕ್ಕೆ ಬ್ರೇಕ್ ಬೀಳಲಿದ್ದು, ಗುರಿಕಾರ ಅವರು ಕೊನೆಯವರೆಗೂ ಶಿಕ್ಷಕ ಮತದಾರರನ್ನು ಸಂಪರ್ಕಿಸಿ ಮತಯಾಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಸ್ಪರ್ಧೆಯಿಂದ ಎದುರಾಳಿಗಳಲ್ಲಿ ನಡುಕ ಶುರುವಾಗಿದ್ದು, ಚುನಾವಣಾ ಕಣ ರಂಗೇರಿದೆ. ಶುಕ್ರವಾರ ಗುರಿಕಾರ ಅವರು ಹಾವೇರಿ ಜಿಲ್ಲೆಯ ಅನೇಕ ಊರುಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಹಾವೇರಿ ಜಿಲ್ಲೆಗೆ ತೆರಳುವ ಮುಂಚೆ ಹುಬ್ಬಳ್ಳಿ ಸಮೀಪದ ವರೂರಿನಲ್ಲಿರುವ ಜೈನ್ ಹೈಸ್ಕೂಲ್‌ ಹಾಗೂ ಕಾಲೇಜಿಗೆ ತೆರಳಿದ ಗುರಿಕಾರ ಅವರು, ತಮಗೆ ಪ್ರಥಮ ಪ್ರಾಶ್ಯಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು. ವಿಶೇಷ ಎಂದರೆ ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಲಾಯಿತು. ಸಿದ್ದರಾಮಯ್ಯ ಅವರೂ ಗುರಿಕಾರ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಶಿಕ್ಷಕ ಮತದಾರರಲ್ಲಿ ದೂರವಾಣಿ ಮೂಲಕವೇ ಮನವಿ ಮಾಡಿದರು.

ಸಿದ್ದರಾಮಯ್ಯ ಮಾತನಾಡಿದ ವೀಡಿಯೋ ಪ್ಲೇ ಮಾಡಿ.. ನಂತರ ಅಲ್ಲಿಂದ ಹಾವೇರಿ ಜಿಲ್ಲೆಯ ಅಕ್ಕಿಆಲೂರಿನ ಸರ್ಕಾರಿ ಪದವಿ ಕಾಲೇಜು, ಎಚ್‌ಟಿಇಎಸ್ ಹೈಸ್ಕೂಲ್ ಹಾಗೂ ಪದವಿ ಕಾಲೇಜು, ಸರ್ಕಾರಿ ಉರ್ದು ಪ್ರೌಢಶಾಲೆ, ಹಂಸಭಾವಿಯ ಮೃತ್ಯುಂಜಯ ಬಾಲಿಕಾ ಪ್ರೌಢಶಾಲೆ, ಮಹಾಂತಸ್ವಾಮಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು, ದುರ್ಗದ ಪ್ರೌಢಶಾಲೆ, ರೂರಲ್ ಪಾಲಿಟೆಕ್ನಿಕ್ ಶಾಲೆ ಸೇರಿದಂತೆ ಅನೇಕ ಕಡೆಗಳಲ್ಲಿ ತೆರಳಿದ ಗುರಿಕಾರ ಅವರು ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಬಸವರಾಜ ಗುರಿಕಾರ ಅವರು, ನಾಲ್ಕು ದಶಕಗಳಿಂದ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಇದುವರೆಗೂ ಕೂಡ ಅವರ ಸಮಸ್ಯೆಗಳು ಬಗೆಹರಿದಿಲ್ಲ. ಹೀಗಾಗಿಯೇ ಪ್ರಸಕ್ತ ವರ್ಷ ಶಿಕ್ಷಕರು ಬದಲಾವಣೆ ಬಯಸಿದ್ದು, ಬದಲಾವಣೆಗೆ ಇದು ಸಕಾಲವಾಗಿದೆ. ಒಂದೇ ಒಂದು ಅವಕಾಶವನ್ನು ಶಿಕ್ಷಕ ಮತದಾರರು ನನಗೆ ಮಾಡಿಕೊಡಬೇಕಿದೆ. ಶಿಕ್ಷಕರ ಸೇವಕನಾಗಿ ಕೆಲಸ ಮಾಡಲಿದ್ದೇನೆ ಎಂದು ಮನವಿ ಮಾಡಿದರು.

Edited By : Nagesh Gaonkar
PublicNext

PublicNext

10/06/2022 07:28 pm

Cinque Terre

76.51 K

Cinque Terre

0

ಸಂಬಂಧಿತ ಸುದ್ದಿ